ವಚನ ಭಾರತ

Author : ಎ.ಆರ್.  ಕೃಷ್ಣಶಾಸ್ತ್ರಿ

Pages 489

₹ 150.00




Year of Publication: 2009
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಎ. ಆರ್‌. ಕೃಷ್ಣಶಾಸ್ತ್ರಿ ಕನ್ನಡ ಪ್ರಮುಖ ಲೇಖಕರಲ್ಲಿ ಒಬ್ಬರು. ಮಹಾಭಾರತವನ್ನು ಸರಳ ಹಾಗೂ ಸೊಗಸಾದ ಕನ್ನಡದಲ್ಲಿ ಪ್ರಕಟಿಸಿದ್ದರು. ’ವಚನ ಭಾರತ’ ಎಂದು ಕರೆದಿರುವ ಲೇಖಕರ ಉತ್ತಮ ಗದ್ಯ ಚೆನ್ನಾಗಿದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಗದ್ಯದಲ್ಲಿ ಮಹಾಭಾರತದ ಕತೆಯನ್ನು ಹೇಳಿರುವ ಕ್ರಮ ಗಮನಾರ್ಹ. ಕನ್ನಡದ ಕ್ಲಾಸಿಕಲ್ ಕೃತಿಗಳಲ್ಲಿ ಒಂದು ಎಂದು ಈ ಗ್ರಂಥವನ್ನು ಪರಿಗಣಿಸಲಾಗುತ್ತದೆ.

About the Author

ಎ.ಆರ್.  ಕೃಷ್ಣಶಾಸ್ತ್ರಿ
(12 February 1890 - 01 February 1968)

ಮಹಾಭಾರತವನ್ನು ಸರಳಗನ್ನಡದಲ್ಲಿ ಹೇಳುವ ವಚನ ಭಾರತದ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರಿರುವ ಎ.ಆರ್. ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸ್ಥಾಪಕರಾಗಿ, ಸಂಪಾದಕರಾಗಿ ನೀಡಿದ ಕೊಡುಗೆ ಅಮೂಲ್ಯ. 1890ರ ಫೆಬ್ರುವರಿ 12ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿ ತಾಯಿ ವೆಂಕಮ್ಮ. ತಂದೆಯಿಂದ ಸಂಸ್ಕೃತ ವ್ಯಾಸಂಗ ಮಾಡಿದ ಶಾಸ್ತ್ರಿಗಳು ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿದ ಮೇಲೆ ಬಿ.ಎ. ಪದವಿ (1913)  ಮತ್ತು ಮದರಾಸಿನಲ್ಲಿ ಕನ್ನಡ ಎಂ.ಎ. (1915) ಪದವಿ ಪಡೆದರು. ಪ್ರಾರಂಭದಲ್ಲಿ ಡೆಪ್ಯೂಟಿ ಕಮೀಷನರ್ ಆಫೀಸಿನಲ್ಲಿ ಅನಂತರ ಓರಿಯಂಟಲ್ ಲೈಬ್ರರಿಯಲ್ಲಿ ಕೆಲಸ ಮಾಡಿದ ಅವರು ನಂತರ 1916ರಲ್ಲಿ ಸೆಂಟ್ರಲ್ ...

READ MORE

Related Books