ಚಿಂತಕ ತೀರ್ಥರಾಮ ವಳಲಂಬೆ ಅವರ ಕೃತಿ-ತುಳು ಸುಭಾಷಿತೊಲು. ತುಳು ಭಾಷೆಯ ಸುಭಾಷಿತಗಳ ಸಂಗ್ರಹ ಕೃತಿ ಇದಾಗಿದೆ. ಸುಭಾಷಿತಗಳು ವಿಶ್ವದೆಲ್ಲೆಡೆ ಅರ್ಥದ ದೃಷ್ಟಿಯಿಂದ ಒಂದೇ ಆಗಿರುತ್ತವೆ. ಆದರೆ, ಭಾಷೆಗಳು ಬೇರೆ ಬೇರೆಯಾಗಿರುತ್ತವೆ. ಆದರೆ, ಕೆಲವೊಂದು ಸಲ ಭೌಗೋಳಿಕ ಹಾಗೂ ಸಾಂಸ್ಕೃತಿಕ ದೃಷ್ಟಿಯಿಂದ ವಿಭಿನ್ನವಾಗಿರುತ್ತವೆ. ಪ್ರಾದೇಶಿಕವಾಗಿಯೂ ವಿಶಿಷ್ಟತೆ ಹೊಂದಿರುವ ಸುಭಾಷಿತಗಳು ಸರ್ವ ಕಾಲಕ್ಕೂ ಓದಲು ಅರ್ಹವಾದವು. ಈ ಹಿನ್ನೆಲೆಯಲ್ಲಿ, ಕರುನಾಡಿನ ಭಾಗವೇ ಆದ ತುಳುನಾಡಿನ ಸುಭಾಷಿತಗಳನ್ನು ಲೇಖಕರು ಸಂಗ್ರಹಿಸಿ ನೀಡಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.