The Tibetan book of the dead-ಈ ಕೃತಿಯ ಸಂಕ್ಷಿಪ್ತ ರೂಪವೇ ಟಿಬೇಟಿಯನ್ನರ ಸತ್ತವರ ಪುಸ್ತಕ. ಲೇಖಕ-ಪತ್ರಕರ್ತ ಅಗ್ನಿ ಶ್ರೀಧರ ಅವರು ರಚಿಸಿದ್ದಾರೆ. ಮನುಷ್ಯನನ್ನು ತೀವ್ರವಾಗಿ ಕಾಡುವ ಸಂಗತಿಗಳ ಪೈಕಿ ಸಾವಿನ ನೆನಪು ನಿರಂತರ. ಸಾವಿಲ್ಲದಿದ್ದರೆ ಸಮಸ್ಯೆಗಳೂ ಇರುತ್ತಿರಲಿಲ್ಲ. ವಿದ್ಯೆ, ಸಂಪತ್ತು, ಯಶಸ್ಸು ಈ ಎಲ್ಲದಕ್ಕೂ ಸಾವು ಕೊನೆ ಹಾಡುತ್ತದೆ. ಇಂತಹ ವಿಚಾರ ಧಾರೆಯ ಟಿಬೇಟಿಯನ್ನರ ಧಾರ್ಮಿಕ ಕೃತಿ ಇದು. ಭಗವದ್ಗೀತೆ, ಬೈಬಲ್, ಕುರಾನ್‍ಗಳಂತೆ ಇದು 1927 ವರೆಗೂ ಧಾರ್ಮಿಕ ಕೃತಿಯಾಗಿಯೇ ಉಳಿದಿತ್ತು. ಟಿಬೇಟಿನಲ್ಲಿ ಮಕ್ಕಳಿಗೆ ಈ ಗ್ಳುರಂಥವನ್ನು ಬೋಧಿಸಲಾಗುತ್ತಿತ್ತು. 1927ರಲ್ಲಿ ಬ್ರಿಟನ್ನಿನಲ್ಲಿ ನೆಲೆಸಿದ್ದ ಆಸ್ಟ್ರಿಯನ್ ಡಬ್ಲ್ಯೂ.ವೈ. ಈವಾನ್ಸ್-ವೆಂಟ್ಜ್ ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿದಾಗ, ಅದಕ್ಕೆ ಆ ಕಾಲದ ಜಗತ್ಪ್ರಸಿದ್ಧ ಮನೋತಜ್ಞ ಕಾರ್ಲ್ ಯೂಂಗ್ ಬರೆದ ವಿಸ್ತೃತವಾದ, ಪಾಂಡಿತ್ಯಪೂರ್ಣ ಮುನ್ನುಡಿಯಿಂದಾಗಿ ವಿಸ್ಮಯಕಾರಿ ಮನಃಶಾಸ್ತ್ರೀಯ ಗ್ರಂಥವೆನ್ನುವ ಖ್ಯಾತಿಯನ್ನು ಗಳಿಸಿತು. ಇಂದು ಈ ಕೃತಿಯನ್ನು ಆಧ್ಯಾತ್ಮಿಕ ಪಥದಲ್ಲಿರುವವರು ಮಾತ್ರವಲ್ಲದೆ ಕಲಾವಿದರು, ಖಗೋಳ ವಿಜ್ಞಾನಿಗಳು, ಸೂಫಿಗಳು ಹೀಗೆ ಎಲ್ಲರೂ ಓದುತ್ತಾರೆ. ಸಾವನ್ನು ಕುರಿತ ಪುಸ್ತಕವಾದರೂ ಬದುಕಿನ ಕ್ಷಣಗಳ ಕುರಿತು ಒಳನೋಟ ನೀಡುತ್ತದೆ.
©2024 Book Brahma Private Limited.