ಭಾಷೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ಗಣ್ಯರೆನಿಸಿದ್ದ ರಾಳದಲ್ಲಿ ಆನಂತ ಕೃಷ್ಣಶರ್ಮರು ಸಂಸ್ಕೃತಿ ವಿಷಯವಾಗಿ ನಡೆಸಿದ ಕೈಂಕರ್ಯ, ನೀಡಿದ ಕೊಡುಗೆ ಬಹಳ ದೊಡ್ಡದು. ತಮ್ಮ ಹಲವು ರೀತಿಯ ಚಟುವಟಿಕೆಗಳ ಮೂಲಕ ಭಾವಜಗತ್ತನ್ನು ಉನ್ನತೀಕರಿಸಲು, ತನ್ಮೂಲಕ ಬದುಕನ್ನು ಸಮೃದ್ಧಗೊಳಿಸಲು ಶ್ರಮಿಸಿದವರು. ಅವರು, 'ಸಾಹಿತ್ಯ ಮತ್ತು ಜೀವನ ಕಲೆ' ಕೃತಿಯಲ್ಲಿ ಸಂಕಲಿಸಲ್ಪಟ್ಟಿರುವ ಅವರ ಭಾಷಣಗಳು, ಲೇಖನಗಳ ಆಶಯವೂ ಇದೇ ಆಗಿದೆ. ಈ ಕೃತಿಯ ‘ಮರು ಓದು’ ನಮ್ಮ ದೃಷ್ಟಿಯನ್ನೂ ಧೋರಣೆಯನ್ನೂ ನೇರ್ಪುಗೊಳಿಸಿಕೋಳ್ಳುವುದಕ್ಕೆ ಸಹಕಾರಿಯಾದೀತು.
©2025 Book Brahma Private Limited.