ಗುಲ್ಬರ್ಗಾದ ಮಹಾನ್ ಸೂಫಿ ಸಂತ ಬಂದೇ ನವಾಜ್ರ ಕುರಿತು ಬರೆದಿರುವ ಕೃತಿ ‘ಪ್ರೇಮ, ಸೂಫಿ ಬಂದೇ ನವಾಜ್’. ಬೋಡೆ ರಿಯಾಜ್ ಅಹ್ಮದ್ ತಿಮ್ಮಾಪುರಿ ಅವರು ರಚಿಸಿದ್ದಾರೆ.
ಸೂಫಿ ಅರ್ಥ ವ್ಯಾಖ್ಯಾನದಿಂದ ಆರಂಭವಾದ ಬೌದ್ಧಿಕ ಎತ್ತರದ ಲೇಖನಗಳು ಸೂಫಿ ಚಿಂತನೆಯ ಮೂಲ ಲಕ್ಷಣಗಳನ್ನು ಚರ್ಚಿಸುತ್ತಾ ಹೋಗುತ್ತದೆ. ಇದರೊಂದಿಗೆ ವಿಭಿನ್ನ ಸೂಫಿ ಸಂಪ್ರದಾಯಗಳ ಹಾಗೂ ತತ್ವಕಾರರ ಪರಿಚಯವನ್ನೂ ಲೇಖಕರು ಮಾಡಿಕೊಟ್ಟಿದ್ದಾರೆ.
ವಿಷಯ ಸರಳೀಕರಣ ಹಾಗೂ ಸೂಕ್ತ ಸಮರ್ಥನೆಗಾಗಿ ವಸ್ತುವನ್ನು ಐದು ಭಾಗಗಳಾಗಿ ವಿಂಗಡಿಸಿದ್ದು, ಮೊದ ಭಾಗ -ಸೂಫಿ ಅನುಭವದಲ್ಲಿ ಸೂಫಿ ಹಾಗೂ ತಸವ್ವುಫ್, ಉಗಮ, ವ್ಯಾಖ್ಯೆ ಹಾಗೂ ಪರಿಭಾಷೆ ಮತ್ತು ಸೂಫಿ ಚಿಂತನೆ, ಇಬ್ನೆ ಅರಬಿ ಮತ್ತು ವಹದತುಲ್ ವುಜೂದ್ ಕುರಿತು ಬರೆಯಲಾಗಿದೆ. ಎರಡನೇ ಭಾಗದಲ್ಲಿ ಭಾರತದಲ್ಲಿ ಸೂಫಿ ದಾರ್ಶನಿಕತೆ ಕುರಿತು ಚರ್ಚಿಸಿರುವ ಲೇಖಕರು ಭಾರತದಲ್ಲಿ ಸೂಫಿ ದಾರ್ಶನಿಕತೆಯ ಆಗಮನ ಹಾಗೂ ಪ್ರಸಾರ, ದಖನ್ನಲ್ಲಿ ಸೂಫಿಗಳು, ಬಹಮನಿ ಪೂರ್ವ ದಖ್ಖನಿನ ಸೂಫಿಗಳು, ಖಾದ್ರಿಯಾ ಸೂಫಿ ಪರಂಪರೆ, ಜುನೈದಿಯಾ ಸೂಫಿ ಪರಂಪರೆ, ಬಹನಿ ಆಳ್ವಿಕೆಯ ಜುನೈದಿ ಸೂಫಿ ಪರಂಪರೆಯ ಸೂಫಿಗಳು ಹಾಗೂ ಬಹಮನಿ ಯುಗಳ ಚಿಶ್ತಿಯಾ ಪರಂಪರೆ ಸೂಫಿ ಕುರಿತು ವಿಶ್ಲೇಷಣಾತ್ಮಕವಾಗಿ ರಚಿಸಿದ್ದಾರೆ ಮೂರನೇ ಭಾಗದಲ್ಲಿ ಕಲಬುರ್ಗಿಯ ಖ್ವಾಜಾ ಬಂದೇ ನವಾಜ್ ಅವರ ಕುರಿತು, ನಾಲ್ಕನೇ ಭಾಗದಲ್ಲಿ ಬಂದೇ ನವಾಜ್ ಮತ್ತು ಅನುಭವ ಹಾಗೂ ಐದನೇ ಭಾಗದಲ್ಲಿ ಬಂದೇ ನವಾಜ್ರ ಸಾಹಿತ್ಯಕ ಕೊಡುಗೆ ಕುರಿತು ಕೃತಿಯು ಗಂಭೀರವಾಗಿ ಚರ್ಚಿಸಿದೆ.
©2024 Book Brahma Private Limited.