ಖ್ಯಾತ ಲೇಖಕ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಕೃತಿ-ಸೂಫಿ ಸಂತರು. ಒಟ್ಟು 25 ಸೂಫಿ ಸಂತರ ಬಗ್ಗೆ ಬರೆದ ಲೇಖನಗಳಿವೆ. ಭಾರತೀಯ ಜನಜೀವನದಲ್ಲಿ ಕೋಮು ಸಾಮರಸ್ಯದ ಬದುಕು ಹಾಸುಹೊಕ್ಕಾಗಿದೆ. ಅದನ್ನು ಹದಗೆಡಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದರೂ ಸಾಮರಸ್ಯದ ಬದುಕಿಗೆ ಧಕ್ಕೆ ಬಂದಿಲ್ಲ ಎಂಬುದನ್ನು ಇತಿಹಾಸದುದ್ದಕ್ಕೂ ಕಾಣಬಹುದು. ಇಲ್ಲಿ ಅನೇಕ ಧರ್ಮೀಯ ಜನರಿದ್ದಾರೆ. ಪ್ರತಿ ವ್ಯಕ್ತಿಯೂ ಎಷ್ಟು ಹಿಂದುವೋ ಅಷ್ಟೇ ಮುಸ್ಲಿಮೂ ಹೌದು. ಅದರ ಚಿಂತನೆ ಪ್ರಾರಂಭವಾಗುವುದೇ ಬೆರಗಿನಲ್ಲಿ. ಅದು ಪೂಜಿಸುವುದು, ಮೆಚ್ಚುವುದು, ಚಿಂತಿಸುವುದು ಬೆರೆಗಿನಲ್ಲಿ. ಅಸಾಮಾನ್ಯರೆನ್ನಿಸುವ ವಿಭೂತಿ ಪುರುಷರು ಹುಟ್ಟಿಸುವ ಬೆರೆಗನ್ನು ಈ ಮನಸ್ಸು ಹಿಡಿದಿಡುವುದು, ಕಾಪಾಡುವುದು, ನೆನಸಿಕೊಳ್ಳುವುದು ಬೆರಗಿನ ಪರಿಭಾಷೆಗಳನ್ನು ಪಡೆದ ಪವಾಡಗಳಲ್ಲಿ; ಅಲೌಕಿಕ ಘಟನೆಗಳಲ್ಲಿ. ಎಲ್ಲ ಪವಾಡಗಳೂ ಒಂದೇ ಬಗೆಯವು ಅಲ್ಲ. ಕೆಲವು ಮೌಢ್ಯವನ್ನು ಬೆಳೆಸಲೆಂದು ಕಟ್ಟಿಹೇಳುವಂಥವು; ಭಯ ಹುಟ್ಟಿಸಲೆಂದು ಕೆಲವು. ಆದರೆ ಸೂಫಿಸಂತರ ಪವಾಡಗಳೆಲ್ಲವೂ ಪ್ರೀತಿಯನ್ನು ಬೆಳೆಸುವಂಥವು; ಔದಾರ್ಯವನ್ನು ಸಾರುವಂಥವು. ಇಲ್ಲಿಯ ಭಾಷೆಯು ತುಂಬಾ ಕಾವ್ಯಾತ್ಮಕವಾಗಿದೆ.
©2024 Book Brahma Private Limited.