ʼಮಾತಿನ ಮಂಟಪʼ ಪುಸ್ತಕವು ವಿಡಂಬನಾತ್ಮಕ ಹರಟೆಗಳ ಸಂಕಲನವಾಗಿದ್ದು ಲೇಖಕ ಗೌಡಗೆರೆ ಮಾಯುಶ್ರೀ ಅವರಿಂದ ರಚನೆಯಾಗಿದೆ. ಹರಟೆ ಸಂಕಲನದಲ್ಲಿ32 ಲೇಖನಗಳಿದ್ದು, ಮೊದಲನೆಯ ಸೋಂಬೇರಿ ಕಟ್ಟೆಮ್ಯಾಲೆ ಎನ್ನುವ ಹರಟೆಯೇ ಪವಿತ್ರ ಸ್ಥಳವಾದ ಅರಳೀಮರ ಕಟ್ಟೆಯ ಮೇಲೆ ಕೆಲಸವೇ ಇಲ್ಲದ ಹಳ್ಳಿ ಜನರು ಜ್ಞಾನಿಗಳಂತೆ ಹರಟೆ ಹೊಡೆದು ಕಾಲಾಹರಣದ ಜೊತೆಗೆ ತಮ್ಮ ಭವಿಷ್ಯವನ್ನೇ ಮೈಮರೆಯುವ ಸನ್ನಿವೇಶ ಧ್ವನಿಪೂರ್ಣವಾಗಿ ಚಿತ್ರಿತವಾಗಿದೆ. ನ್ಯಾಯ ಎಲ್ಲಿದೆ ಎನ್ನುವ ಹರಟೆಯಲ್ಲಿ ರೈತ ರಂಗಣ್ಣನ ಬವಣೆಯ ಕುಲುಮೆಯಲ್ಲಿ ಕುದಿಯುವ ಅವನ ಸಂಕಟ ಅನಾವರಣವಾಗಿದೆ. ಜೊತೆಗೆ, ಆಧುನಿಕ ಜೀವನದ ಸಾಧನವಾಗಿರುವ ಮೊಬೈಲ್ ಬಗ್ಗೆ, ಮೀಸಲಾತಿ ಬಗ್ಗೆ, ಕನ್ನಡಿಗರ ಅವಹೇಳನದ ಬಗ್ಗೆ ಹಾಗೂ ಎಣ್ಣೆ ಇದ್ರೆ ಓಟು ಇಲ್ಲಾಂದ್ರೆ.... ಎನ್ನುವ ಇಂದಿನ ಚುನಾವಣೆಯಲ್ಲಿ ರಾಜಕಾರಣಿಗಳು ಕಪ್ಪು ಹಣವನ್ನು ತಂದು ಹೆಂಡ, ಕೈಗಿಷ್ಟು ದುಡ್ಡು ಕೊಟ್ಟು ಓಟು ಹಾಕಿಸಿಕೊಳ್ಳುವ ಆಟ ಆಡುವುದನ್ನು ನವಿರಾಗಿ ವರ್ಣಿಸಿದ್ದಾರೆ.
©2024 Book Brahma Private Limited.