ʼಚಿಕ್ಕದೊಡ್ಡವರುʼ ಹರಟೆ ಸಂಕಲನವನ್ನು ಲೇಖಕ ಡಾ. ಶಿವರಾಮ ಕಾರಂತರು ರಚಿಸಿದ್ದು, ಕುಲಕರ್ಣಿ ಶ್ರೀನಿವಾಸ ಅವರು ಸಂಪಾದಿಸಿದ್ದಾರೆ. ಈ ಕೃತಿಯ ಪರಿವಿಡಿಯಲ್ಲಿ ನಮ್ಮ ಶಂಭು, ಮಾನಪ್ಪನವರು, ಒಟ್ಟು ಸಾಟಿ ಶಾಸ್ತ್ರಿಗಳು, ಉದ್ಧಾರದ ಉತ್ತಮರಾಯರು, ಪೀಕದಾನಿ ರಾಮಯ್ಯನವರು, ಸುಧಾರಣೆಯ ಸದಾಶಿವಯ್ಯ, ವಿಲೆವಾರಿ ವಾಸುದೇವಯ್ಯ, ಪ್ರದರ್ಶನದ ಪಾವಪ್ಪನವರು, ಮಸಲ್ ಮಾಧು, ಆಶಾವಾದಿ ಅಣ್ಣಪ್ಪಯ್ಯ, ಬೇಟೆ ಬಂಡ್ಯಪ್ಪನವರು, ಮಿ.ದುಸ್ತುಬಿನ್, ಪರಿತ್ಯಕ್ತ ದೀಪಸ್ತಂಭ, ಗುಡಿಯಿಲ್ಲದ ಮಹಾಲಿಂಗ ಅದ್ಯಾಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಪ್ರಸ್ತಾಪಿತ ವ್ಯಕ್ತಿಗಳ ಚಿತ್ರಣವು ನಿಜವಾಗಿದ್ದು, ಆದರೆ, ನೈಜ ನಾಮಧೇಯಗಳನ್ನು ಬದಲಿಸಿ ಬರೆಯಲಾಗಿದೆ.
©2025 Book Brahma Private Limited.