ಕೀರ್ತನ ಶರಭ

Author : ಎಸ್‌. ಸುನಂದ

Pages 96

₹ 100.00




Year of Publication: 2022
Published by: ಅಮೂಲ್ಯ ಪುಸ್ತಕ
Address: ನಂ.64, `ಆಸರೆ\' 5ನೇ ಅಡ್ಡರಸ್ತೆ, 14ನೇ ಮುಖ್ಯರಸ್ತೆ, ಜ್ಯೋತಿನಗರ, ಚಂದ್ರಾಲೇಔಟ್, ಬೆಂಗಳೂರು - 560 072
Phone: 9448676770

Synopsys

ಹರಿದಾಸ ಪರಂಪರೆಯಲ್ಲಿ ಆನೇಕ ದಾಸವರೇಣ್ಯರು ತಾವು ನಂಬಿದ್ದ ತತ್ವ ಸಿದ್ಧಾಂತವನ್ನು ಪ್ರಚಾರ ಮಾಡುವುದಕ್ಕೆ ಪರಿಕತೆಯನ್ನು ಸಮರ್ಥವಾಗಿ ಬಳಸಿಕೊಂಡಿದ್ದರು. ಮಾಧ್ವ ಸಿದ್ಧಾಂತವನ್ನು ಸರಳವಾಗಿ ಜನರಿಗೆ ತಿಳಿಸುವುದಕ್ಕೆ ಹರಿಕಥೆಯನ್ನು ಬಳಸಿಕೊಂಡವರಲ್ಲಿ ಯಲಿಯೂರು ಶ್ರೀವೆಂಕಟಾಚಲದಾಸರೂ ಪ್ರಮುಖರು. ಅವರು ಹರಿಕಥೆ ಮಾಡುದಲ್ಲದೆ ಸುಮಾರು 150-200 ಮೇಲಿನ ಕೀರ್ತನೆಗಳನ್ನು ರಚಿಸಿದ್ದರೆಂದು ಅವರ ಕುಟುಂಬಸ್ಥರಿಂದ ತಿಳಿದುಬಂದಿದೆ. ಕರ್ನಾಟಕದಾದ್ಯಂತ ಹರಿದಾಸ ಅವರ ಕೆಲವು ಕೀರ್ತನೆಗಳನ್ನು ದಿನನಿತ್ಯ ಹೇಳಿಕೊಳ್ಳುವುದೂ ಇದೆ. ಆದರೆ ಈ ಕೀರ್ತನೆಗಳನ್ನು ಶ್ರೀವೆಂಕಟಾಚಲದಾಸರು ರಚಿಸಿದ್ದರೆಂದು ಯಾರಿಗೂ ತಿಳಿದಿಲ್ಲ, ಅಷ್ಟರ ಮಟ್ಟಿಗೆ ಅವರು ಅಪ್ರಚಲಿತರಾಗಿದ್ದಾರೆ. ಈ ಮಹನೀಯರ ಬದುಕು ಮತ್ತು ಹರಿದಾಸ ಸಾಹಿತ್ಯಕ್ಕೆ, ಹರಿಕಥಾ ಕ್ಷೇತ್ರಕ್ಕೆ ಅವರು ಮಾಡಿರುವ ಅಪಾರ ಕೊಡುಗೆಯನ್ನು ಪರಿಚಯಿಸುವುದು ಈ ಕಿರು ಪುಸ್ತಕದ ಉದ್ದೇಶವಾಗಿದೆ.

About the Author

ಎಸ್‌. ಸುನಂದ

ಎಸ್‌.ಸುನಂದ ಮೂಲತಃ ಚಿಂತಾಮಣಿ ತಾಲ್ಲೂಕು ಪಾತಪಲ್ಲಿ ಗ್ರಾಮದವರು. ಪ್ರಾಥಮಿಕ ಶಿಕ್ಷಣದ ನಂತರ, ಬೆ೦ಗಳೂರಿನ ವಿಮಾನಪುರದ ವಿಶ್ವೇಶ್ವರಯ್ಯ ಪ್ರೌಢಶಾಲೆ, ವೈಟ್‌ ಫೀಲ್ಡ್‌ ಸತ್ಯ ಸಾಯಿ ಬಾಬಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದರು. ಬಿ.ಎಮ್‌ಎಸ್‌ ಮಹಿಳಾ ಕಾಲೇಜಿನಿಂದ ಬಿಎ ಪದವಿ ಪಡೆದು ನಂತರ ಬೆಂಗಳೂರಿನ ಸಿಎಂ ಸ೦ಸ್ಥೆಯಲ್ಲಿ ಸೇವೆ ಸಲ್ಲಿಸುತ್ತಾ ಸಮಾಜಶಾಸ್ತ್ರದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಗಳಿಸಿದರು. ನಿವೃತ್ತಿ ನಂತರ ದೇವ ವಿಜ್ಞಾನ ಸಂಸ್ಥೆಯಲ್ಲಿ ಶ್ರೀ ಹರಿದಾಸ ಪರಂಪರೆಗೆ ಯಲಿಯೂರು ಶ್ರೀ ವೆಂಕಟಾಚಲದಾಸರ ಕೊಡುಗೆ' ವಿಷಯದಲ್ಲಿ ಎಂಫಿಲ್‌ ಹಾಗೂ ಡಾಕ್ಟರೇಟ್ ಪಡೆದಿದ್ದಾರೆ. ಸುನಂದ ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ...

READ MORE

Related Books