`ಕರ್ನಾಟಕ ಶಾಸ್ತ್ರೀಯ ಸಂಗೀತ ಭಾಗ-1' ಎಂಬುದು ಲೇಖಕಿ ಆರ್. ಎನ್. ಶ್ರೀಲತಾ ಅವರು ರಚಿಸಿದ ಕೃತಿ. ಕರ್ನಾಟಕ ಸಂಗೀತದ ಸ್ವರೂಪಗಳನ್ನು ಅತ್ಯಂತ ಶಾಸ್ತ್ರೀಯವಾಗಿ ವಿವರಿಸಿರುವ ಪಠ್ಯವನ್ನು ಈ ಕೃತಿ ಒಳಗೊಂಡಿದ್ದು, ಸಂಗೀತಾಸಕ್ತರಿಗೆ ಉಪಯುಕ್ತವಾಗಿದೆ. ಕರ್ನಾಟಕ ಸಂಗೀತವು ಹೆಚ್ಚು-ಕಡಿಮೆ ಸಂಪೂರ್ಣವಾಗಿ ಭಕ್ತಿಪ್ರಧಾನವೇ ಆಗಿದೆ. ಇದರಲ್ಲಿ ಮುಖ್ಯವಾಗಿ ರಾಗ ಹಾಗೂ ತಾಳವನ್ನು ಪ್ರಧಾನ ಅಂಶಗಳಿರುತ್ತವೆ. ಕರ್ನಾಟಕ ಸಂಗೀತವು ಕರ್ನಾಟಕದಲ್ಲಿ ಉಗಮಗೊಂಡಿದ್ದು ಈ ಹೆಸರು ಬಂದಿದೆ ಎಂದು ಹೇಳಲಾಗುತ್ತಿದೆ. ಕಿವಿಗೆ ಇಂಪಾಗಿ ಕೇಳುವ ಸಂಗೀತವೂ ಎಂಬ ಅರ್ಥ ಕರ್ನಾಟಕ ಸಂಗೀತಕ್ಕೆ ಇದ್ದು, ಅದಕ್ಕೆ ಈ ಹೆಸರು ಬಂದಿದೆ ಎಂಬ ಅಭಿಪ್ರಾಯವಾಗಿದೆ. ಕರ್ನಾಟಕ ಸಂಗೀತದಲ್ಲಿ ಸ-ರಿ-ಗ-ಮ-ಪ-ದ-ನಿ. ಎಂಬ ಏಳು ಮೂಲ ಸ್ವರಗಳಿವೆ. ಇಂತಹ ಪರಿಚಯದ ಅಂಶಗಳನ್ನು, ವಿಷಯಗಳನ್ನು ಒಳಗೊಂಡ ಕೃತಿ ಇದು.
©2024 Book Brahma Private Limited.