`ಕರ್ನಾಟಕ ಸಂಗೀತದಲ್ಲಿ ಮನೋಧರ್ಮ, ಸಂಗೀತದ ಪ್ರಕಾರಗಳು' ಎಂಬುದು ಲೇಖಕಿ ಆರ್.ಎನ್. ಶ್ರೀಲತಾ ಅವರು ರಚಿಸಿದ ಕೃತಿ. ಕಿವಿಗೆ ಇಂಪಾಗಿ ಕೇಳಿಸುತ್ತದೆ ಎಂಬ ಕಾರಣಕ್ಕೆ ಕರ್ನಾಟಕ ಸಂಗೀತ ಎಂದೂ ಹಾಗೂ ಕರ್ನಾಟಕದಲ್ಲೇ ಈ ಸಂಗೀತದ ಉಗಮ ವಾಗಿದ್ದು, ಈ ಹೆಸರು ಬರಲು ಕಾರಣ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲಿ ಮೂಲ ಏಳು ಸ್ವರಗಳಿವೆ. ರಾಗ-ತಾಳ ಇವು ಈ ಸಂಗೀತದ ಪ್ರಧಾನ ಅಂಶಗಳು. ಕರ್ನಾಟಕ ಸಂಗೀತದ ವಿವಿಧ ಪ್ರಕಾರಗಳು ಮೂಲ ಸಂಗೀತದ ಪ್ರಧಾನ ಅಂಶಗಳನ್ನು ಮೀರುವುದಿಲ್ಲ. ಇಂತಹ ವಿಷಯಗಳನ್ನು ಆಧರಿಸಿ ಬರೆದ ಕೃತಿ ಇದು.
©2024 Book Brahma Private Limited.