ಕರ್ನಾಟಕ ಸಂಗೀತಶಾಸ್ತ್ರ ಬೋಧಿನಿ

Author : ಆರ್‌. ವಸಂತಲಕ್ಷ್ಮಿ

Pages 252

₹ 50.00




Year of Publication: 2014
Published by: ಭಾರತೀ ಪ್ರಕಾಶನ
Address: ಸರಸ್ವತಿಪುರ, ಮೈಸೂರು

Synopsys

ಸಂಗೀತದ ಬಗ್ಗೆ ಮೂಲ ಜ್ಞಾನವನ್ನು ತಿಳಿಸುತ್ತದೆ. ಸಂಗೀತಶಾಸ್ತ್ರ ಪ್ರವೇಶಿಕೆ ಎನ್ನಬಹುದು. ಕಲಿಕಾರ್ಥಿಗಳಿಗೆ, ಬೋಧಕರಿಗೆ ಉಪಯೋಗವಾಗುವಂತೆ ಸರಳ ಮತ್ತು ಆತ್ಮೀಯ ಶೈಲಿಯಲ್ಲಿ ಕೃತಿ ರಚನೆಯಾಗಿದೆ. ಸಂಗೀತ ಪರಂಪರೆ, ಪಾರಿಭಾಷಿಕತೆ. ವಾಗ್ಗೇಯಕಾರರ ಜೀವನ ಚರಿತ್ರೆ ಸಂಗೀತಶಾಸ್ತ್ರಕ್ಕೆ ಸಂಬಂಧಪಟ್ಟ ಬೇರೆಬೇರೆ ಭಾಷೆಯ ಕೃತಿಗಳ ಭಾವಾರ್ಥ, ಇತ್ಯಾದಿಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ.
 

About the Author

ಆರ್‌. ವಸಂತಲಕ್ಷ್ಮಿ

ಕರ್ನಾಟಕ ಸಂಗೀತ ಶಾಸ್ತ್ರ ಬೋಧಿನಿ ಕೃತಿಯ ಲೇಖಕಿಯರಾದ ವಿದುಷಿ ಆರ್. ವಸಂತಲಕ್ಷ್ಮಿಯವರು ಸಂಪ್ರದಾಯ ಬದ್ದ ಕುಟುಂಬದಲ್ಲಿ ಜನಿಸಿದರು.  ತಂದೆ ರಾಮಸ್ವಾಮಿ ಹಾಗೂ ತಾಯಿ ಅನ್ನಪೂರ್ಣಮ್ಮ ದಂಪತಿಗಳು ಕಟ್ಟಾ ಸಂಗೀತಾಭಿಮಾನಿಗಳು. ನಿರಂತರ ಪ್ರೋತ್ಸಾಹದ ಬೆಂಬಲದಿಂದ ಪ್ರೇರಿತರಾದ ವಸಂತಲಕ್ಷ್ಮಿ ಅವರು ಸಂಗೀತದಲ್ಲಿ ಅನನ್ಯವಾದುದನ್ನು ಸಾಧಿಸಲು ಸಾಧ್ಯವಾಗಿದೆ. ಸಂಗೀತದಲ್ಲಿ ಸ್ನಾತಕೊತ್ತರ ಪದವಿಯಲ್ಲಿ ಮೊದಲನೇ ರ್‍ಯಾಂಕ್ ಮತ್ತು ಚಿನ್ನದ ಪದಕವನ್ನು ಪಡೆದು ರಾಜ್ಯಮಟ್ಟದ ಗಾಯನ ಮತ್ತು ವೀಣಾವಾದನ ವಿದ್ಯತ್ ಪರೀಕ್ಷೆಗಳಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸುಮಾರು ಇಪ್ಪತ್ತು ವರ್ಷಗಳ ದೀರ್ಘ ಬೋಧನೆಯ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚಿನ ಶಿಷ್ಟರನ್ನು ತರಬೇತಿಗೊಳಿಸಿದ್ದಾರೆ. ನಿತ್ಯವೂ ...

READ MORE

Related Books