ಜಾಣ ಜಾಣೆಯರಿಗಾಗಿ ಇದೋ ಪದಬಂಧ ಭಾಗ-2

Author : ವಿದ್ಯಾ ವಿ. ಹಾಲಭಾವಿ

Pages 232

₹ 170.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 0804011 4455

Synopsys

ಸುಳಿವು ಓದಿ ಪದ ಬರೆಯುವ ಆಟ- ಸುಡೊಕು. ಈ ಲೋಕ ಕುರಿತು ಮಾಹಿತಿಯನ್ನು ವಿದ್ಯಾ ವಿ. ಹಾಲಭಾವಿ ’ಜಾಣ ಜಾಣೆಯರಿಗಾಗಿ ಇದೋ ಪದಬಂಧ’ ಕೃತಿಯಲ್ಲಿ ನೀಡಿದ್ದಾರೆ. ಕೊಟ್ಟಿರುವ ಸುಳಿವು(ಕ್ಲೂ)ಗಳನ್ನಾಧರಿಸಿ ಸೂಕ್ತ ಪದಗಳನ್ನು ಎಡದಿಂದ ಬಲಕ್ಕೆ ಅಥವಾ ಮೇಲಿಂದ ಕೆಳಕ್ಕೆ ಇರುವ ಮನೆಗಳಲ್ಲಿ ತುಂಬುವ ಪದಬಂಧ ಈಗ ಆಸಕ್ತರ ಗಮನ ಸೆಳೆಯುತ್ತಿದೆ.

ಅಂತೆಯೇ, ವಿಶ್ವದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪದಬಂಧಕ್ಕೆ ಸ್ಥಳ ನಿಗದಿಪಡಿಸಲಾಗುತ್ತಿದೆ. ಬುದ್ಧಿಶಕ್ತಿಯನ್ನು ಚುರುಕುಗೊಳಿಸಿ,ಭಾಷಾ ಜ್ಞಾನವನ್ನು ಹೆಚ್ಚಿಸುವ ಈ ಪದಬಂಧ ಹೇಗೆ ಜನ್ಮ ತಾಳಿತು, ಎಂಬುದರ ಕುರಿತು ಕೃತಿಯು ಮಾಹಿತಿ ನೀಡುತ್ತದೆ. 

About the Author

ವಿದ್ಯಾ ವಿ. ಹಾಲಭಾವಿ

ಬೆಂಗಳೂರಿನಲ್ಲಿ ನೆಲೆಸಿರುವ ಪದ ಸುಡೊಕು ಬರಹಗಾರ್ತಿ ವಿದ್ಯಾ ವಿ. ಹಾಲಭಾವಿ, ವಿವಿಧ ವಿಷಯಗಳ ಬಗ್ಗೆ ಬರೆದ ಸುಮಾರು 8000ಕ್ಕೂ ಹೆಚ್ಚು ಪದಬಂಧಗಳು ನಾನಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಗ್ರಿಡ್ಲರ್‌ ಪಜ಼ಲ್‌ ಹಾಗೂ ಸ್ಟ್ರಿಮೊ ಪಜ಼ಲ್‌ ಅನ್ನು ಕನ್ನಡಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಜಾಣ ಜಾಣೆಯರಿಗಾಗಿ ಇದೋ ಪದಬಂಧ (ಭಾಗ 1,2), ಬಿಡಿಸಿದರೆ ಪದ ಸುಡೊಕು, ಮೆದುಳು ಚುರುಕು ಇವರ ಪ್ರಮುಖ ಕೃತಿಗಳು. ಇವರಿಗೆ ಆದರ್ಶ ಮಹಿಳೆ ಪುರಸ್ಕಾರ, ರಾಜಾಜಿನಗರ ರಾಜ್ಯೋತ್ಸವ ಪ್ರಶಸ್ತಿ, ಕಲಾಶ್ರೀ ಪ್ರಶಸ್ತಿ, ಹೂ ಗೊಂಚಲು ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗಳು ಸಂದಿವೆ. ...

READ MORE

Related Books