ಪದಹಾಸು

Author : ಅ.ನಾ. ಪ್ರಹ್ಲಾದರಾವ್

Pages 203

₹ 160.00




Year of Publication: 2022
Published by: ವಸಂತ ಪ್ರಕಾಶನ
Address: # 360, 10ನೇ ಮುಖ್ಯ, ಬಿ-ಮುಖ್ಯ ರಸ್ತೆ, ಕಾಸ್ಮೊಪಾಲಿಟಿನ್ ಕ್ಲಬ್, ಜಯನಗರ ಪೂರ್ವ, ಜಯನಗರ, ಬೆಂಗಳೂರು-560011
Phone: 080 2244 3996

Synopsys

ಪದವ್ಯೂಹ, ಪದಲೋಕ, ಪದಜಗ ...ಹೀಗೆ ಬೌದ್ಧಿಕ ಕಸರತ್ತಿನ ಹಲವು ಕೃತಿಗಳನ್ನು ರಚಿಸಿರುವ ಲೇಖಕ ಅ.ನಾ. ಪ್ರಹ್ಲಾದರಾವ್ ಅವರ ಇದೇ ಉದ್ದೇಶದ ಮತ್ತೊಂದು ಕೃತಿ-ಪದಹಾಸು. ಮೆದುಳಿಗೆ ಕಸರತ್ತು ನೀಡುವ ವಿಭಿನ್ನ ಪದಬಂಧ ಸಂಪುಟ ಎಂದು ಲೇಖಕರು ಹೇಳಿದ್ದಾರೆ. ಗಣಿತದಂತೆ ಪದಬಂಧವು ಸಹ ಬೌದ್ಧಿಕ-ತಾರ್ಕಿಕ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸುತ್ತದೆ. ಸಮಯದ ಸದುಪಯೋಗವೂ ಆಗುವುದಲ್ಲದೇ, ನಮ್ಮ ಬುದ್ಧಿಶಕ್ತಿಯ ತೀಕ್ಷ್ಣತೆಯನ್ನು ಹೆಚ್ಚಿಸುವ ಇಂತಹ ಕೃತಿಗಳು, ಬದುಕಿನ ಕೆಲ ಸಮಸ್ಯೆಯ ಪರಿಹಾರಕ್ಕೆ ಒಳನೋಟಗಳನ್ನು, ಸುಳಿವುಗಳನ್ನು ನೀಡುತ್ತವೆ.

About the Author

ಅ.ನಾ. ಪ್ರಹ್ಲಾದರಾವ್
(24 July 1953)

ಅ.ನಾ.ಪ್ರಹ್ಲಾದರಾವ್‌ರವರು, ಕನ್ನಡದ ಪದಬಂಧ ಲೇಖಕರಲ್ಲಿ ಪ್ರಮುಖರು. ಇವರು ಕನ್ನಡದಲ್ಲಿ ಸುಮಾರು ನಲವತ್ತು ಸಾವಿರ ಪದಬಂಧಗಳನ್ನು ರಚಿಸಿದ್ದಾರೆ. ಇವರ ಪದಬಂಧಗಳು ಕನ್ನಡದ ಪ್ರಮುಖ ಪ್ರತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.ಭಾರತದ ಪ್ರಾದೇಶಿಕ ಭಾಷೆಗಳಲ್ಲಿಯೇ ಅತೀ ಹೆಚ್ಚು ಪದಬಂಧ ರಚಿಸುವ ಮೂಲಕ 2015, 2016 ಹಾಗೂ 2017ರ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿಕೊಳ್ಳುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದ ಕೀರ್ತಿ ಇವರದು. ಬೆಂಗಳೂರು, ಮಂಡ್ಯ ಹಾಗೂ ಕೋಲಾರದಲ್ಲಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ,ಪ್ರಜಾರತ್ನ, ಪದಬಂಧಬ್ರಹ್ಮ, ಪದಬಂಧಸಾಮ್ರಾಟ್, ಮುಂತಾದ ಬಿರುದುಗಳನ್ನು ನೀಡಿವೆ.  ...

READ MORE

Related Books