ಮಿದುಳಿಗೆ ಕಸರತ್ತು ನೀಡುವ ವಿಭಿನ್ನ ಪದಬಂಧ ಸಂಪುಟ ಎಂಬ ಉಪಶೀರ್ಷಿಕೆಯೊಂದಿಗೆ ಲೇಖಕ ಅ.ನಾ. ಪ್ರಹ್ಲಾದ ರಾವ್ ಅವರು ರಚಿಸಿದ ಕೃತಿ-ಪದಸಂಪದ. ಪದಬಂಧಗಳು ಬೌದ್ಧಿಕ ಚಟುವಟಿಕೆಯನ್ನು ಪ್ರೇರೇಪಿಸುತ್ತವೆ. ಪದ ಸಂಪತ್ತನ್ನು ಹೆಚ್ಚಿಸುತ್ತದೆ. ತಾರ್ಕಿಕ ಸಾಮರ್ಥ್ಯವನ್ನು ಚುರುಕುಗೊಳಿಸುತ್ತದೆ. ವ್ಯಕ್ತಿಯ ಸೃಜನಶೀಲತೆಗೆ ಒಂದು ಮಾಧ್ಯಮವಾಗಿಯೂ ಕೆಲಸ ಮಾಡುತ್ತದೆ. ನೀಡಿರುವ ಸೀಮಿತ ಪದಗಳನ್ನು ಬಳಸಿ, ಬಿಟ್ಟು ಹೋದ ಪದಗಳನ್ನು ಭರ್ತಿ ಮಾಡುವ ಮೂಲಕ ಅರ್ಥವನ್ನು ಸ್ಫುರಿಸಿ, ಒಂದು ಪೂರ್ಣಶಬ್ದವಾಗುವಂತೆ ಮಾಡುವುದು ಎಲ್ಲರಿಗೂ ಸಾಧ್ಯವಾಗದು. ಕೆಲವರಿಗೆ ಬೇಗನೆ ಹೊಳೆದರೆ ಮತ್ತೂ ಕೆಲವರಿಗೆ ತಡವಾಗಿ ಹೊಳೆಯುತ್ತದೆ. ಹೀಗೆ ಆಸಕ್ತರ ಮಿದುಳಿಗೆ ಉತ್ತಮ ಕಸರತ್ತು ನೀಡುವ ಪದಬಂಧಗಳನ್ನು ವೈವಿಧ್ಯಮಯವಾಗಿ ರಚಿಸುವ ಜಾಣ್ಮೆ-ಕೌಶಲವನ್ನು ಲೇಖಕರು ತೋರಿದ್ದು, ಈ ಕೃತಿಯು ತನ್ನ ವಿಶಿಷ್ಟತೆಯಿಂದ ಲಿಮ್ಕಾ ದಾಖಲೆಯಲ್ಲಿ ಸೇರಿದೆ.
©2024 Book Brahma Private Limited.