ಹಳಗನ್ನಡ ವಿಶೇಷ ಶಬ್ದಕೋಶ

Author : ಎಲ್. ಬಸವರಾಜು

Pages 400

₹ 360.00




Year of Publication: 2012
Published by: ಅಭಿರುಚಿ ಪ್ರಕಾಶನ
Address: ನಂ. 386, 14ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರ, ಮೈಸೂರು-9
Phone: 9980560013

Synopsys

ಡಾ. ಎಲ್. ಬಸವರಾಜು ಅವರು ರಚಿಸಿದ ಹಳೆಗನ್ನಡ ವಿಶೇಷ ಶಬ್ದಕೋಶ ಕೃತಿಯು ಕನ್ನಡ ನಿಘಂಟು ವಲಯದಲ್ಲಿ ತುಂಬಾ ಪ್ರಮುಖವಾಗಿದೆ. ಹಳಗನ್ನಡವನ್ನು ಅರ್ಥ ಮಾಡಿಕೊಳ್ಳಲು ವಿಶೇಷ ಹಾಗೂ ಕಠಿಣ ಶಬ್ದಗಳನ್ನು ತಿಳಿಯಲು ಈ ನಿಘಂಟು ಸಹಕಾರಿ. ಸುವರ್ಣ ಕರ್ನಾಟಕ ನೆನಪಿನ ಸಾಹಿತ್ಯ ಮಾಲೆಯಡಿ ಕೃತಿ ಪ್ರಕಟಗೊಂಡಿದೆ.,

About the Author

ಎಲ್. ಬಸವರಾಜು
(07 October 1919 - 29 January 2012)

ಕನ್ನಡದಲ್ಲಿ ಶ್ರೇಷ್ಠ ವಿದ್ವಾಂಸರಾಗಿ ಹಳಗನ್ನಡದಲ್ಲಿ ಪ್ರಭುತ್ವ ಪಡೆದಿದ್ದ ಎಲ್. ಬಸವರಾಜು ಅವರು ಕೋಲಾರದ ಇಡಗೂರಿನಲ್ಲಿ 1919ರ ಅಕ್ಟೋಬರ್ 7ರಂದು ಜನಿಸಿದರು. ತಂದೆ ಲಿಂಗಪ್ಪ- ತಾಯಿ ಈರಮ್ಮ. ಬಾಲ್ಯದಲ್ಲಿ ಬಡತನದ ಬವಣೆಯಿಂದ ಊರಿನ ಭೀಮೇಶ್ವರ ದೇಗುಲದಲ್ಲಿ ಅರ್ಚಕರಾಗಿದ್ದರು. ಸಿದ್ಧಗಂಗೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು. ದಾವಣಗೆರೆ ಡಿ.ಆರ್.ಎಂ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ಕೆಲಕಾಲಾನಂತರ ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜು, ಕನ್ನಡ ಅಧ್ಯಯನ ಸಂಸ್ಥೆಗಳಲ್ಲಿ ಅಧ್ಯಾಪಕರಾಗಿ ಅನಂತರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಇವರ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾಡಿನ ಅನೇಕ ಸಂಸ್ಥೆಗಳು ಇವರನ್ನು ...

READ MORE

Related Books