ಬುದ್ಧಿಗೆ ಕಸರತ್ತನ್ನು ನೀಡುವ, ಖಾಲಿ ಚೌಕಗಳಲ್ಲಿ ಅಕ್ಷರಗಳನ್ನು ಬರೆಯುವ ಪದಗಳ ಆಟವೇ ಪದ ಸುಡೊಕು. ಸರಳತೆಯೇ ಇದರ ವೈಶಿಷ್ಠ. ತರ್ಕಶಾಸ್ತ್ರದ ಗಂಧಗಾಳಿ ಗೊತ್ತಿಲ್ಲದ ಸಾಮಾನ್ಯರನ್ನೂ ತರ್ಕಿಸುವಂತೆ ಮಾಡುವ ಶಕ್ತಿ ಇದಕ್ಕಿದೆ. ಹೆಚ್ಚಿನ ಪದ ಭಂಡಾರವಿರದವರೂ ಕೂಡ ಪದ ಸುಡೊಕುವನ್ನು ಬಿಡಿಸಬಹುದು. ಗ್ರಹಣಶಕ್ತಿ ಹಾಗೂ ಅಪಾರ ತಾಳ್ಮೆ ಇರುವ ಯಾರು ಬೇಕಾದರೂ ಈ ಪದ ಸುಡೊಕು ಆಡಬಹುದು. ಸುಡೊಕು ಬಿಡಿಸುವುದು ಹೇಗೆ, ಅದರ ರಚನೆ ಹೇಗಿರುತ್ತದೆ ಎಂಬುದನ್ನು’ಬಿಡಿಸಿದರೆ ಪದ ಸುಡುಕು ಮೆದುಳು ಚುರುಕು’ ಕೃತಿಯು ವಿವರಿಸುತ್ತದೆ.
©2024 Book Brahma Private Limited.