ಬಣ್ಣದ ಬದುಕು ಯಕೂಬ ಗೊರೂರು ಆನಂತರಾಜು ಅವರ ಕೃತಿಯಾಗಿದೆ. ಗ್ರಾಮ್ಯ ಬದುಕಿನ ನೋವು ನಲಿವಿನ ಹಂದರ ಲೇಖನವು ನಾಲ್ಕು ವಿಭಿನ್ನ ವಿಚಾರಗಳೊಂದಿಗೆ ಗ್ರಾಮೀಣ ಜನರು ಋತುಮಾನದ ವೈಫರೀತ್ಯದಿಂದ ಪಡುವ ಬವಣೆಗಳನ್ನು ಮನಸ್ಸಿಗೆ ನಾಟುವಂತೆ ಹೇಳುವಲ್ಲಿ ಯಶಸ್ವಿಯಾಗಿದ್ದರೆ, ತಮ್ಮ ಸ್ನೇಹಿತರೂ ತಬಲಾ ವಾದಕರೂ ಆದ ಬೇಲೂರ್ ನಾಗೇಶ್ ಅವರ ಬದುಕು, ಪರಿಶ್ರಮ, ಕುಟುಂಬ ಹಾಗೂ ಸಾಧನೆಗಳ ಬಗ್ಗೆ ತಿಳಿಸುತ್ತ ತಬಲಾ ವಾದನ ನಾಟಕ, ಸಂಗೀತಗಳಲ್ಲಿ ಎಷ್ಟು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದನ್ನು ಮನಗಾಣಿಸುವುದರೊಂದಿಗೆ ಪ್ರತಿಯೊಂದು ಲೇಖನವೂ ಸಮಾಜದ ನಾನಾ ಸ್ಥರಗಳ ಬಗ್ಗೆ, ಸಾಧಕರ ಬಗೆಗಿನ ಮಹತ್ತರ ವಿಚಾರಗಳನ್ನು ಅನಾವರಣಗೊಳಿಸುವಲ್ಲಿ ಮೇಲು ಗೈ ಸಾಧಿಸಿದ್ದು, ತಾವೂ ಒಬ್ಬ ಸಾಧಕರಾಗಿ ಇನ್ನಿತರ ಸಾಧಕನ್ನೂ ಆತ್ಮೀಯವಾಗಿ ಪರಿಚಯಿಸಿರುವುದು ಲೇಖಕರ ವಿಶಾಲ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ.
©2024 Book Brahma Private Limited.