ವೃತ್ತಿ ಜೀವನದ ಎಲ್ಲ ಏಳು ಬೀಳುಗಳನ್ನು ಲವಲವಿಕೆಯಿಂದ ತಿಳಿಸುತ್ತದೆ ‘ಇಸ್ಕೂಲು’


''ದಟ್ಟವಾದ ಅಣಶಿಯ ಕಾಡಿನಲ್ಲಿ ತಿರುಗಾಡುವಾಗ ಕಾಲಿಗೆ ಹತ್ತಿಕೊಳ್ಳುವ ಕಾಂಟಿಗಳು ಅವುಗಳಿಂದ ಪಾರಾಗುವ ಬಗೆ, ಚಿತ್ರ ವಿಚಿತ್ರ ಬಗೆಯ ಹಾವುಗಳು ಅವುಗಳೊಂದಿಗೆ ದೈನಂದಿನ ವೃತ್ತಿ ಜೀವನದ ಹೆಣಗಾಟಗಳು ಎಲ್ಲವನ್ನು 'ಚಾರಣದ ಕಥೆ' ಹಾಗೂ 'ಕಾಡೆ ಹಾದಿಯ ತೋರಿತು' ಅಧ್ಯಾಯಗಳಲ್ಲಿ ಸೊಗಸಾಗಿ ಚಿತ್ರಿಸಿದ್ದೀರಿ,'' ಎನ್ನುತ್ತಾರೆ ಡಾ ಪಿ.ಬಿ. ಪ್ರಸನ್ನ. ಅವರು ಅಕ್ಷತಾ ಕೃಷ್ಣಮೂರ್ತಿ ಅವರ ‘ಇಸ್ಕೂಲು’ ಕೃತಿಗೆ ಬರೆದ ಕಾದಂಬರಿ ನಿಮ್ಮ ಓದಿಗಾಗಿ.

ಇಸ್ಕೂಲ್ ಪುಸ್ತಕ ಓದಿ ಮುಗಿಸಿದೆ. ತುಷಾರ ಮಾಸ ಪತ್ರಿಕೆಯಲ್ಲಿ ಬಿಡಿಬಿಡಿಯಾಗಿ ಬಂದದ್ದನ್ನು ಅಲ್ಲಿ ಇಲ್ಲಿ ಓದಿದ್ದೆ. ಈ ಪುಸ್ತಕ ಇಡಿ ಯಾಗಿ ಓದಿಸಿಕೊಂಡು ಹೋಯಿತು. ಪ್ರಾರಂಭ ಮತ್ತು ಕೊನೆಯ ಅಧ್ಯಾಯಗಳನ್ನು ಹೊರತುಪಡಿಸಿ, ಉಳಿದ 18 ಅಧ್ಯಾಯಗಳು ಮುಖ್ಯ ಆಗುತ್ತವೆ. ಮುನ್ನುಡಿಯಲ್ಲಿ ಬರಗೂರು ರಾಮಚಂದ್ರಪ್ಪನವರು ಹೇಳಿದಂತೆ ಕೇವಲ ಶಾಲೆಯ ಕಲಿಸುವಿಕೆ ಒಂದೇ ಇಲ್ಲಿ ಮುಖ್ಯವಾಗದೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿಯತ್ತ ಮನಸ್ಸು ಮಾಡುವ ಶಿಕ್ಷಕಿ ಒಬ್ಬಳು ಹೇಗೆ ಪ್ರತಿಕ್ಷಣದಲ್ಲಿಯೂ ಸವಾಲುಗಳನ್ನು ಎದುರಿಸುತ್ತಾಳೆ ಎನ್ನುವುದನ್ನು ಆಪ್ತವಾಗಿ ಚಿತ್ರಿಸಿದೆ.

ದಟ್ಟವಾದ ಅಣಶಿಯ ಕಾಡಿನಲ್ಲಿ ತಿರುಗಾಡುವಾಗ ಕಾಲಿಗೆ ಹತ್ತಿಕೊಳ್ಳುವ ಕಾಂಟಿಗಳು ಅವುಗಳಿಂದ ಪಾರಾಗುವ ಬಗೆ, ಚಿತ್ರ ವಿಚಿತ್ರ ಬಗೆಯ ಹಾವುಗಳು ಅವುಗಳೊಂದಿಗೆ ದೈನಂದಿನ ವೃತ್ತಿ ಜೀವನದ ಹೆಣಗಾಟಗಳು ಎಲ್ಲವನ್ನು 'ಚಾರಣದ ಕಥೆ' ಹಾಗೂ 'ಕಾಡೆ ಹಾದಿಯ ತೋರಿತು' ಅಧ್ಯಾಯಗಳಲ್ಲಿ ಸೊಗಸಾಗಿ ಚಿತ್ರಿಸಿದ್ದೀರಿ. ಸಾಮಾನ್ಯವಾಗಿ ಹಳ್ಳಿಗಾಡಿನ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷಕರು ಸಂಬಳ ಒಂದು ಬಂದರೆ ಸಾಕು ಎನ್ನುವ ದೃಷ್ಟಿಕೋನವನ್ನು ಹೊಂದಿಕೊಂಡು ಶಿಕ್ಷಣದ ಬಗ್ಗೆ ಯಾವುದೇ ಆಸಕ್ತಿ ಇಲ್ಲದೆ ಯಾಂತ್ರಿಕವಾಗಿ ಕಾಯಕದಲ್ಲಿ ತೊಡಗಿಕೊಂಡಿರುತ್ತಾರೆ. ಆದರೆ ಧನಾತ್ಮಕ ಚಿಂತನೆ ಉಳ್ಳ ನೀವು ವೃತ್ತಿ ಜೀವನದ ಎಲ್ಲ ಏಳು ಬೀಳುಗಳನ್ನು ಲವಲವಿಕೆಯಿಂದಲೇ ನಿರೂಪಿಸಿದ್ದೀರಿ. ಎಂದ ಮಾತ್ರಕ್ಕೆ ಈ ಪುಸ್ತಕದಲ್ಲಿ ಮಿತಿಗಳು ಇಲ್ಲ ಎಂದಲ್ಲ.

ಕಾಲ ಸೂಚಕ ಪ್ರತ್ಯಯಗಳು ಏಕ ಪ್ರಕಾರವಾಗಿ ಇಲ್ಲ. ಕೆಲವು ಸಾಲುಗಳು ಭೂತಕಾಲದಲ್ಲಿಯೂ ಮತ್ತೊಂದಿಷ್ಟು ಸಾಲುಗಳು ಭವಿಷ್ಯತ್ಕಾಲ ವಾಚಕವಾಗಿಯೂ ಇವೆ. ಎಲ್ಲವೂ ಭೂತಕಾಲವಾಚಕವಾಗಿದ್ದರೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಅಣಶಿಯ ಜನಸಾಮಾನ್ಯರ ಭಾಷೆಯ ಸೊಗಡು ಇಲ್ಲಿ ವ್ಯಕ್ತವಾಗಿಲ್ಲ. 'ರಾಧಕ್ಕೋರು' ಎನ್ನುವ ಕಲ್ಪಿತ ಪಾತ್ರಕ್ಕಿಂತ ಉತ್ತಮ ಪುರುಷ ವಾಚಕವಾಗಿ ನೀವೇ ನಿಮ್ಮನ್ನು ನಿರೂಪಿಸಿಕೊಂಡಿದ್ದರೆ ಹೆಚ್ಚು ಆತ್ಮೀಯವಾಗುತ್ತಿತ್ತು. ಪ್ರಸಾದ ಎನ್ನುವ ಶಬ್ದ ಮಹಾಪ್ರಾಣವಾಗಿ ತುಂಬ ಕಡೆ ಬಳಕೆಯಾಗಿದೆ. ಅದು ನಿಮ್ಮ ಬರವಣಿಗೆಯ ದೋಷವಾಗಿತ್ತೋ, ಅಥವಾ ಮುದ್ರಾರಾಕ್ಷಸನ ಹಾವಳಿಯೋ ಗೊತ್ತಿಲ್ಲ. ಉಳಿದಂತೆ ಪುಸ್ತಕ ಖುಷಿ ಕೊಟ್ಟಿತು.

MORE FEATURES

ವಾರದ ಲೇಖಕ ವಿಶೇಷದಲ್ಲಿ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚಾರ್ಯ

29-09-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕವಿ, ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚ...

ಕೃತಕ ಬುದ್ಧಿಮತ್ತೆ ಪತ್ರಿಕಾಲೋಕ ಪ್ರವೇಶ ಮಾಡಿದೆ...

29-09-2024 ಬೆಂಗಳೂರು

“ದೇಶದ ಮಾಧ್ಯಮ ಕ್ಷೇತ್ರ ಇಂದು ವಿಸ್ತ್ರತವಾಗಿ ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ಬೆಳವಣಿಗೆ...

ಪ್ರತಿಯೊಬ್ಬನಿಗೂ ತನ್ನ ನಿರ್ಧಾರವೇ ಸರಿ ಕಾಣುವುದು ಅವನ ತಪ್ಪಲ್ಲ

29-09-2024 ಬೆಂಗಳೂರು

"ಜೀವನವನ್ನೇ ನರಕ ಮಾಡಿದ ತಂದೆಗೆ ತನ್ನ ಕಿಡ್ನಿ ಕೊಡದಿರಲು ಮಗನಿಗೆ ಅವನದೇ ಆದ ಕಾರಣಗಳು ! ಕಿಡ್ನಿ ಬಯಸಿದವ ,ಅದನ್ನ...