“ತೇರು-ಶೀರ್ಷಿಕೆಯನ್ನು ನೋಡಿ ಕೈಗೆತ್ತುಕೊಂಡಾಗ ಇದಕ್ಕಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದು ನೋಡಿ ಸಂತಸದ ಜೊತೆ ಆಕರ್ಷಣೆಯೂ ಹೆಚ್ಚಾಗತೊಡಗಿತು,” ಎನ್ನುತ್ತಾರೆ ಭರತ್ ಎಂ. ಅವರು ರಾಘವೇಂದ್ರ ಪಾಟೀಲ ಅವರ “ತೇರು” ಕೃತಿ ಕುರಿತು ಬರೆದ ವಿಮರ್ಶೆ.
“ತೇರು-ಶೀರ್ಷಿಕೆಯನ್ನು ನೋಡಿ ಕೈಗೆತ್ತುಕೊಂಡಾಗ ಇದಕ್ಕಾಗಲೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದು ನೋಡಿ ಸಂತಸದ ಜೊತೆ ಆಕರ್ಷಣೆಯೂ ಹೆಚ್ಚಾಗತೊಡಗಿತು. ಓದಿದ ನಂತರ ಲೇಖಕರ ಮೇಲೆ ನಿಜಕ್ಕೂ ಗೌರವ ಹೆಚ್ಚಾಯ್ತು ಎಂದರೆ ಅತಿಶಯೋಕ್ತಿಯಲ್ಲ.
“ದೇಸಾಯಿಯವರು ದೇವರ ಸೇವೆಯ ಉತ್ಸವಕ್ಕೆ ತೇರನ್ನು ಕಟ್ಟಿಸಿ ಧರಮನಟ್ಟಿ ಊರಿನ ಏಳಿಗೆಗಾಗಿ ಅದನ್ನು ವಿಜೃಂಭಣೆಯಿಂದ ಉರುಳಿಸಲು ಹೊರಟಾಗ ಅದು ಒಂದಿಂಚೂ ಮುಂದೆ ಅಲುಗಾಡುವುದಿಲ್ಲ, ಮುಖ್ಯ ತೊಂದರೆಗೆ ಪುರೋಹಿತರನ್ನು ಕೇಳಿದಾಗ ಕೆಳವರ್ಗದ ನರಬಲಿಯನ್ನು ಬೇಡುತ್ತಿದೆ ಎಂದು ಹೇಳಿದಾಗ ಬಲಿಯಾಗುವುದು ದ್ಯಾವಪ್ಪನ ಮಗ ಚಂದ್ರಾಮ.
ಸೂರ್ಯ-ಚಂದ್ರರಿರುವ ತನಕ ದ್ಯಾವಪ್ಪ ಕುಟುಂಬದವರ ರಕ್ತ ತೇರನ್ನು ಸೋಕಿದಮೇಲೆಯೇ ಮುಂದೆ ಹೋಗಬೇಕು ಎನ್ನುವದನ್ನು ದೇಸಾಯಿಯವರು ಆಜ್ಞಾಪಿಸುತ್ತಾರೆ. ಮುಂದೆ ದ್ಯಾವಪ್ಪ ತನ್ನ ಪ್ರಾಯಶ್ಚಿತ್ತಕ್ಕೆ ಗಂಟಾಳ ಸ್ವಾಮಿಗಳನ್ನು ಕೇಳಿದಾಗ ರಕ್ತ ಶುದ್ಧಿಯನ್ನು ಸೂಚಿಸುತ್ತಾರೆ. ಮುಂದೆ ತಲೆಮಾರು ಕಳೆದಂತೆ ಇದರಬಗ್ಗೆಯೇ ವಿಚಾರವಂತಿಕೆಯಲ್ಲಿ ಮುಳುಗಿದಾಗ ಎಲ್ಲವೂ ನಶ್ವರವೆನುಸುತ್ತದೆ. ದ್ಯಾವಪ್ಪ ಹಾಗೂ ಸ್ವಾಯಜ್ಜನ ಪಾತ್ರ ಬಿಡದಂತೆ ಕಾಡುತ್ತದೆ.”
“ದಲಿತವರ್ಗದ ಮೇಲೆ ಹಿಂದೆ ನಡೆದ ದಬ್ಬಾಳಿಕೆಯ ಪರಮಾವಧಿ, ಧಾರ್ಮಿಕ ಭಕ್ತಿಯಲ್ಲಿನ ಪೊಳ್ಳುತನ, ಜನಗಳ ಅಂಧಕಾರತೆ, ಮುಗ್ಧತೆ ಎಲ್ಲವೂ ತೆರೆದುಕೊಳ್ಳುತ್ತದೆ.”
“ಶಾರೀರಿಕ ಕಾಮದ ಬಗ್ಗೆ ಒಂದು ಸಾಲು ಇಲ್ಲದ ಕೃತಿ.
ಇಂಥ ಕೃತಿ ರಚಿಸಿದ “ರಾಘವೇಂದ್ರ ಪಾಟೀಲ”ರಿಗೆ ಧನ್ಯೋಸ್ಮಿ.!”
“ನಾ ಓದಿದ ಅತ್ಯುತ್ತಮ ಕೃತಿಯ ಸಾಲಿಗೆ ಹೊಸ ಸೇರ್ಪಡೆ“
“ಮತ್ತೆ ಕಾದಂಬರಿ ಬರೆಯಬೇಕು ಎಂದುಕೊಂಡ ತಕ್ಷಣವೇ ಗೌರಮ್ಮಳ ಬದುಕನ್ನು ಒಳಗೊಂಡಂತೆ ನನ್ನ ಹಳ್ಳಿಯ ಬದುಕಿನ ಸುಂದರ ಘ...
“ವಿನಾಯಕರ ಈ ಬರೆಹ ವೇಶೈಯೊಬ್ಬಳ ಜೀವನದಲ್ಲಿ ಪುಸ್ತಕಗಳು ನಿರ್ವಹಿಸಿರುವ ಬಹಳಾ ದೊಡ್ಡ ಜವಾಬ್ದಾರಿಯ ಕುರಿತು ಮಾತನಾ...
"ಎಂದೂ ಹುಟ್ಟದ ಮಗುವಿಗೆ ಬರೆದ ಪತ್ರ ಇದು ಅವಿವಾಹಿತ ಯುವತಿಯೊಬ್ಬಳು ಅನಿರೀಕ್ಷಿತವಾಗಿ ತಾಯಾಗುವ ಸಂದರ್ಭ ಬಂದಾಗ ಅವ...
©2025 Book Brahma Private Limited.