"ನನಗೆ ತಿಳಿದ ಮಟ್ಟಿಗೆ ಕವಿತೆಯಲ್ಲಿ ಸೌಂದರ್ಯ ಮೀಮಾಂಸೆ (Aesthetics) ಇರಬೇಕು, ಜೊತೆಗೆ ವಿಚಾರ ಲಹರಿಯು ಸೇರಿರಬೇಕು, ಓದುಗರೊಂದಿಗೆ ಸಂವಾದವೂ ಆಗಿರಬೇಕು. ಕವಿತೆಗೆ ಬೇಕಾದ ಪ್ರಾಸ, ಆದಿಪ್ರಾಸ, ಛಂದಸ್ಸು ಇರಬೇಕು. ಕವಿತೆಯ ಓದು ಒಂದು ವಿಶೇಷ ಅನುಭವವನ್ನು ಒದಗಿಸಬೇಕು. ಕೆಲವೊಮ್ಮೆ ಭಾವನೆಗಳನ್ನು ಬೆಸೆದು ಅದು ಸಂಗೀತಕ್ಕೂ ಒದಗಿ ಭಾವಗೀತೆಯ ರೂಪದಲ್ಲಿ ಕೇಳುಗರಿಗೂ ಸಿಗಬೇಕು", ಎನ್ನುತ್ತಾರೆ ಜಿ. ಎಸ್. ಶಿವಪ್ರಸಾದ್ ಅವರು ತಮ್ಮ "ಮೊನಾಲೀಸಾ" ಕವನ ಸಂಕಲನಕ್ಕೆ ಬರೆದ ಲೇಖಕರ ಮಾತು.
ಮೊನಾಲೀಸಾ ನನ್ನ ಎರಡನೇ ಕವನ ಸಂಕಲನ. ನನಗೆ ತಿಳಿದ ಮಟ್ಟಿಗೆ ಕವಿತೆಯಲ್ಲಿ ಸೌಂದರ್ಯ ಮೀಮಾಂಸೆ (Aesthetics) ಇರಬೇಕು, ಜೊತೆಗೆ ವಿಚಾರ ಲಹರಿಯು ಸೇರಿರಬೇಕು, ಓದುಗರೊಂದಿಗೆ ಸಂವಾದವೂ ಆಗಿರಬೇಕು. ಕವಿತೆಗೆ ಬೇಕಾದ ಪ್ರಾಸ, ಆದಿಪ್ರಾಸ, ಛಂದಸ್ಸು ಇರಬೇಕು. ಕವಿತೆಯ ಓದು ಒಂದು ವಿಶೇಷ ಅನುಭವವನ್ನು ಒದಗಿಸಬೇಕು. ಕೆಲವೊಮ್ಮೆ ಭಾವನೆಗಳನ್ನು ಬೆಸೆದು ಅದು ಸಂಗೀತಕ್ಕೂ ಒದಗಿ ಭಾವಗೀತೆಯ ರೂಪದಲ್ಲಿ ಕೇಳುಗರಿಗೂ ಸಿಗಬೇಕು. ಈ ಒಂದು ಸಂಪ್ರದಾಯವನ್ನು ಗಮನದಲ್ಲಿಟ್ಟುಕೊಂಡು ನಾನು ಕಾವ್ಯರಚನೆಗೆ ತೊಡಗಿದ್ದೇನೆ. ಒಂದು ಕವಿತೆ ಸಂವಾದಕ್ಕೆ ಒಳಪಡಬೇಕಾದರೆ ಅದು ಪ್ರಸಕ್ತ ರಾಜಕೀಯ ಸಾಮಾಜಿಕ ವಸ್ತು ವಿಷಯಗಳನ್ನು ಒಳಗೊಂಡಿರಬೇಕು ಎಂಬ ಪ್ರಜ್ಞೆಯಲ್ಲಿ ನಾನು ಹಲವಾರು ಕವಿತೆಗಳನ್ನು ಇಲ್ಲಿ ರಚಿಸಿದ್ದೇನೆ.
ನನ್ನ ಕೆಲವು ಕವನಗಳು ಅಮೂರ್ತ (Abstract) ವಾಗಿರಬೇಕು ಅದನ್ನು ವಿಶ್ಲೇಷಣೆಯ ಚೌಕಟ್ಟಿನ ಹೊರಗೆ ನಿಲ್ಲಿಸಿ ನೋಡಬೇಕು ಎಂಬ ಹಂಬಲ ನನ್ನದಾಗಿದೆ. ನನ್ನ ಮೊದಲನೇ ಕವನ ಸಂಕಲನದಲ್ಲಿ ಹೆಚ್ಚು ಕವಿತೆಗಳು ನನ್ನ ಅನಿವಾಸಿ ಬದುಕಿನ ವಸ್ತು ವಿಷಯಗಳಾಗಿದ್ದವು. ನನ್ನ ಬದುಕಿನ ಆ ಒಂದು ಹಂತಕ್ಕೆ ಅವು ಅನಿವಾರ್ಯವಾಗಿತ್ತು. ಅದನ್ನು ಮೀರಿದ ಇತ್ತೀಚಿನ ಕವಿತೆಗಳು ಹಲವಾರು ವಿಷಯಗಳನ್ನು ಆವರಿಸಿಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ, ಧಾರ್ಮಿಕ, ರಾಜಕೀಯ ಧ್ರುವೀಕರಣ, ನಮ್ಮ ಆಲೋಚನಾ ಕ್ರಮಗಳಲ್ಲಿ ಮೂಡಿರುವ ಬಿರುಕುಗಳು, ಸಾಮಾಜಿಕ ಮತ್ತು ಆರ್ಥಿಕ ಅಸಮತೆ, ಧರ್ಮ ಮತ್ತು ರಾಜಕೀಯದ ಬೆರಕೆ, ಅಲ್ಪಸಂಖ್ಯಾತರ ಬಗ್ಗೆ ತಳೆದಿರುವ ನಮ್ಮ ನಿಲುವುಗಳು, ಶೋಷಣೆ, ಧರ್ಮದ ಅತಿಯಾದ ಬಳಕೆ, ಜಾತಿವಾದ, ಅತಿಯಾದ ರಾಷ್ಟ್ರ ಪ್ರೇಮ, ವ್ಯಕ್ತಿಪೂಜೆ, ವೈಚಾರಿಕತೆಯ ಕೊರತೆ, ಪ್ರಜಾಪ್ರಭುತ್ವ ಮೌಲ್ಯಗಳ ಕುಸಿತ ನಮ್ಮ ನೈತಿಕ ಪ್ರಜ್ಞೆಯನ್ನು ಕಾಡಬೇಕಾದ ವಿಚಾರಗಳು. ಈ ಒಂದು ಸನ್ನಿವೇಶದಲ್ಲಿ ಒಬ್ಬ ಕವಿ ಮತ್ತು ಲೇಖಕನಿಗೆ ಇಂತಹ ವಿಚಾರಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ನೈತಿಕ ಸಾಮಾಜಿಕ ಜವಾಬ್ದಾರಿ ಬೇಕಾಗಿದೆ. ಈ ಒಂದು ಹಿನ್ನೆಲೆಯಲ್ಲಿ ನನ್ನ ಕೆಲವು ಕವಿತೆಗಳು ಮೂಡಿ ಬಂದಿವೆ. ಇಲ್ಲಿ ಸುಮಾರು 48 ಕನ್ನಡ ಕವನಗಳಲ್ಲದೆ 14 ಇಂಗ್ಲಿಷ್ ಕವಿತೆಯೂ ಸೇರಿದೆ ನನ್ನ ಕಲ್ಪನೆಗೆ ನಿಲುಕಿದ ಒಂದೆರಡು ಕನ್ನಡ ಕವನಗಳನ್ನು ಇಂಗ್ಲಿಷ್ ಭಾಷೆಗೆ ಕನುವಾದ ಮಾಡಲು ಪ್ರಯತ್ನಿಸಿದ್ದೇನೆ. ಶೋಷಿಯಲ್ ಮೀಡಿಯಾ ಬಳಕೆರ ನಡುವೆ ಜನ ಸಾಮಾನ್ಯರಿಗೆ ಸಾಹಿತ್ಯ ಓದುವಷ್ಟು ಪುರುಸೊತ್ತು ಇದೆಯೇ ಎಂದು ಆತಂಕ ಲೇಖಕರನ್ನು ಮತ್ತು ಪ್ರಕಾಶಕರನ್ನು ಕಾಡಿದೆ. ಬಹಳಷ್ಟು ಕವಿತೆಗಳು ಈ ನಡುವೆ ಸೋಷಿಯಲ್ ಮೀಡಿಯಾಗಳ ಮೂಲಕ ಜನರನ್ನು ತಲುಪುತ್ತಿದೆ. ನನ್ನ ಕವಿತೆಗಳು ಅಜ್ಞಾತವಾಗಿ ಕಾದು ಕುಳಿತು ಆಗ ಕವನ ಸಂಕಲನ ರೂಪದಲ್ಲಿ ನಿಮ್ಮ ಕೈ ತಲುಪಿದೆ. ದಯವಿಟ್ಟು ಓದಿ, ನಿಮ್ಮ ಅನಿಸಿಕೆಗಳು ನನಗೆ ಮೌಲಿಕವಾಗಿರುತ್ತವೆ ನಂಬಿರುತ್ತೇನೆ.
- ಜಿ. ಎಸ್. ಶಿವಪ್ರಸಾದ್
“ಕನ್ನಡದ ಮಟ್ಟಿಗೆ ಒಂದನೇ ಹಾಗೂ ಎರಡನೇ ಶತಮಾನದವರೆಗೆ ಹೋಗಿ ಒಂದು ಕಾದಂಬರಿಯನ್ನು ರಚಿಸಿರುವುದು ನಾನು ಮೊದಲು ಎಲ್...
“ಹೆಣ್ಣು ಮಗುವಿನ ಬಾಲ್ಯ ಮತ್ತು ಹದಿಹರೆಯದ ಸಂವೇದನಾಶೀಲತೆಗೆ ಸಿಕ್ಕ, ಸಂಕೀರ್ಣ ಸಮಾಜದ ಒಳನೋಟದ ಅನಾವರಣ ಇಲ್ಲಿದೆ....
“ನಾನು ಇದನ್ನು ಓದುತ್ತಾ ಅಚ್ಚರಿಗೊಂಡಿದ್ದೇನೆ; ದಿಗ್ಭ್ರಾಂತನಾಗಿದ್ದೇನೆ; ಕಣ್ಣಂಚನ್ನು ಒದ್ದೆಯಾಗಿಸಿಕೊಂಡಿದ್ದೇನ...
©2024 Book Brahma Private Limited.