Date: 20-10-2020
Location: ಬೆಂಗಳೂರು
ಕಲಾವಿದೆ: ಕಿಮ್ ಸೂ ಜಾ (Kim Soo Ja)
ಜನನ: 1957 (ದೆಗು, ದಕ್ಷಿಣ ಕೊರಿಯಾ)
ಶಿಕ್ಷಣ: ಫೈನ್ ಆರ್ಟ್ಸ್ ಮಾಸ್ಟರ್ಸ್ ಪದವಿ, ಹಾಂಗ್ ಇಕ್ ವಿವಿ (1984)
ವಾಸ: ನ್ಯೂಯಾರ್ಕ್, ಅಮೆರಿಕ
ಕವಲು: ಕಾನ್ಸೆಪ್ಚುವಲ್ ಆರ್ಟ್
ವ್ಯವಸಾಯ: ಪರ್ಫಾರ್ಮೆನ್ಸ್ ಆರ್ಟ್, ವೀಡಿಯೊ ಆರ್ಟ್, ಇನ್ಸ್ಟಾಲೇಷನ್, ಫೊಟೋಗ್ರಫಿ.
ಕಿಮ್ ಸೂ ಜಾ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಕಿಮ್ ಸೂ ಜಾ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಹೆತ್ತವರ ಕಾರಣದಿಂದಾಗಿ ಬಾಲ್ಯದಲ್ಲಿ ಊರಿಂದೂರಿಗೆ ವರ್ಗಾವಣೆಗೊಂಡು ಹೋಗಬೇಕಿದ್ದ ವಲಸೆ ತನ್ನ ಕುಟುಂಬಕ್ಕೆ ತಂದೊಡ್ಡುತ್ತಿದ್ದ ಸವಾಲುಗಳು ಮತ್ತು ತನ್ನ ತಾಯಿ ದಿನವಿಡೀ ಕುಳಿತು ಸೂಜಿದಾರದಿಂದ ಹೊಲಿದುಹಾಕುತ್ತಿದ್ದ ಹಳೆಯ ಬಟ್ಟೆಗಳ ಕೌದಿಗಳು ಕಿಮ್ ಸೂ ಜಾ ಅವರನ್ನು ಎಷ್ಟು ಪ್ರಭಾವಿಸಿದ್ದವೆಂದರೆ, ಪ್ರಬುದ್ಧ ಕಲಾವಿದೆಯಾಗಿ ಆಕೆ, ವಲಸೆ ತಂದೊಡ್ಡುತ್ತಿದ್ದ ಅಮೂರ್ತ ಸವಾಲುಗಳು ಮತ್ತು ಹೊಲಿಗೆ ತಂದೊಡ್ಡುತ್ತಿದ್ದ ಅಮೂರ್ತ ಬಂಧಗಳನ್ನೇ ಒಟ್ಟಾಗಿಸಿ, ಜನ-ನಿಸರ್ಗ-ನಾಗರಿಕತೆಗಳನ್ನು ಜೋಡಿಸುವ “ಅಮೂರ್ತ ಹೊಲಿಗೆ”ಯನ್ನೇ ತನ್ನ ಅಭಿವ್ಯಕ್ತಿಯ ಧ್ವನಿಯನ್ನಾಗಿಸಿಕೊಂಡರು.
ಆರಂಭದಲ್ಲಿ ಕೌದಿಗಳನ್ನು ಹೊಲಿದು ಕಲಾಕೃತಿಗಳನ್ನು ರಚಿಸಿದ ಸೂ ಜಾ, “ನಾನು ಕಲೆಯಲ್ಲಿ ಬದುಕನ್ನೂ ಬದುಕಿನಲ್ಲಿ ಕಲೆಯನ್ನೂ ಕಂಡಿದ್ದೇನೆ. ಅವು ಬೇರೆಬೇರೆ ಅಲ್ಲ. ಹಾಗಾಗಿ ನಾನು ಜಗತ್ತನ್ನು ನೋಡುವ ನೋಟ ಮತ್ತು ನನ್ನಲ್ಲಿ ಎದ್ದ ಪ್ರಶ್ನೆಗಳು ಬೇರೆಬೇರೆ ಆಗಿರಲಿಲ್ಲ. ಅವು ನನ್ನ ಬದುಕಿನ ಕುರಿತಾಗಿಯೇ ಇದ್ದವು” ಎನ್ನುತ್ತಾರೆ. ಇತಿಹಾಸದುದ್ದಕ್ಕೂ ಯುದ್ಧ ಮತ್ತು ಬರಗಳ ಕಾರಣದಿಂದಾಗಿ ವಲಸೆ ಜೀವನದ ಬಲುಮುಖ್ಯ ಭಾಗವಾಗಿದ್ದ ಕೊರಿಯನ್ ಬದುಕಿನಲ್ಲಿ ಬಟ್ಟೆಗಳ ಮೂಟೆ “ಬೊತ್ತಾರಿ” (ಇವು ಬಟ್ಟೆಗಳನ್ನು ಅಗಲವಾದ ಕೌದಿಯಲ್ಲಿ ಗಂಟುಕಟ್ಟಿ ಮಾಡಿದ ಮೂಟೆಗಳು) ಮಹತ್ವದ್ದು.
ಅವರ ಮೊದಲ ಪರ್ಫಾರ್ಮೆನ್ಸ್ ಗುವಾಂಗ್ಜು ಬೆಟ್ಟದ ಬುಡದಲ್ಲಿ 1980ರಲ್ಲಿ ನಡೆದ ನರಮೇಧಕ್ಕೆ ಬಲಿಯಾದವರ ನೆನಪಿಗಾಗಿ Sewing into Walking-Kyungju (1994) ಎಂಬ ಪರ್ಫಾರ್ಮೆನ್ಸ್ ನಡೆಸಿದ್ದು. ಆ ಜಾಗದಲ್ಲಿ ಸಿಕ್ಕಿದ ಬಟ್ಟೆಗಳನ್ನು ಕೌದಿಯಾಗಿ ಹೊಲಿಯುವ ಈ ಪರ್ಫಾರ್ಮೆನ್ಸ್ ಮಾನವೀಯತೆ ಮತ್ತು ನಿಸರ್ಗದ ನಡುವಿನ ಹೊಲಿಗೆ ಎಂದು ಕರೆಯಲಾಗಿತ್ತು. ಆ ಬಳಿಕದ Cities on the Move – 2727 km Bottari Truck (1999) ಪರ್ಫಾರ್ಮೆನ್ಸ್ ಕೊರಿಯಾದಾದ್ಯಂತ ತಿರುಗಾಡಿದರೆ, ಪ್ಯಾರಿಸ್ ನಲ್ಲಿ ನಡೆದ Bottari Truck – Migrateurs (2007)ಪರ್ಫಾರ್ಮೆನ್ಸ್ ಗಳಲ್ಲಿ ಪ್ಯಾರಿಸಿಗರು ದಾನಮಾಡಿದ ಬೊತ್ತಾರಿ ಮೂಟೆಗಳನ್ನು ಹೊತ್ತ ಟ್ರಕ್ ಗಳು ಅಲ್ಲಿ ದೇಶದಾದ್ಯಂತ ತಿರುಗಾಡಿದ್ದವು.
1999ರ ಹೊತ್ತಿಗೆ ಅಮೆರಿಕಕ್ಕೆ ವಲಸೆ ಹೋದ ಸೂ ಜಾ, A Needle Woman(1999–2001) ಪ್ರದರ್ಶನಕ್ಕಾಗಿ ದಿಲ್ಲಿಗೂ ಬಂದಿದ್ದರು. ಕ್ಯಾಮರಾಗೆ ಬೆನ್ನುಹಾಕಿ ಮಹಾನಗರಗಳ ಬೀದಿಗಳಲ್ಲಿ ನಿಲ್ಲುವ ಪರ್ಫಾರ್ಮೆನ್ಸ್ ಇದು. ಅದೇ ಸರಣಿಯಲ್ಲಿ A Laundry Woman (2000) ವೀಡಿಯೊ ಕಲಾಕೃತಿ ಮುಂಬಯಿಯ ಧೋಬಿಘಾಟ್ ನಲ್ಲಿ ಚಿತ್ರೀಕರಣಗೊಂಡಿತ್ತು.
ಕಳೆದ ಎರಡು ದಶಕಗಳಲ್ಲಿ ಬಣ್ಣ, ಬೆಳಕು ಮತ್ತು ಧ್ವನಿಗಳನ್ನು ಬಳಸಿಕೊಂಡು ಅವರು ಹಲವು ಇನ್ಸ್ಟಾಲೇಷನ್ ಗಳನ್ನು ರಚಿಸಿದ್ದಾರೆ. To Breathe: Bottari (2013) ಬೆಳಕನ್ನು ಬಳಸಿಕೊಂಡು ರಚಿಸಿದ ಇನ್ಸ್ಟಾಲೇಷನ್ ಆದರೆ, The Weaving Factory (2004–2013) ಉಸಿರಾಟದ ಸದ್ದನ್ನು ಒಳಗೊಂಡ ಕಲಾಕೃತಿ. A Needle Woman: Galaxy was a Memory, Earth is a Souvenir (2014) ಎಂಬುದು 46ಅಡಿ ಎತ್ತರದ ಅವರ ಗಮನಾರ್ಹ ಕಲಾಕೃತಿಗಳಲ್ಲಿ ಒಂದು. ಸದ್ಯ ಆಕೆ, ಫ್ರಾನ್ಸ್ ನ ಪ್ರಸಿದ್ಧ ಮೆಟ್ಝ್ ಕ್ಯಾಥೆಡ್ರಲ್ ನಲ್ಲಿ ಗಾಜಿನ ಮೇಲೆ ಚಿತ್ರಗಳನ್ನು ರಚಿಸುವ ಕಮಿಷನ್ಡ್ ಕಲಾಕೃತಿ ರಚಿಸುತ್ತಿದ್ದು, ಅಂತಹ ಅವಕಾಶ ಪಡೆದ ಜಗತ್ತಿನ ಮೊದಲ ಸಮಕಾಲೀನ ಕಲಾವಿದೆ ಎನ್ನಿಸಿದ್ದಾರೆ.
ಈಗ ಮೇ ತಿಂಗಳಿನಿಂದೀಚೆಗೆ ಸ್ವೀಡನ್ ನ ಮಾಲ್ಮೊ ಎಂಬಲ್ಲಿ ಸ್ವೀಡನ್-ಡೆನ್ಮಾರ್ಕ್ ಗಡಿ ಭಾಗದ ಕಾಡಿನಲ್ಲಿ ಸ್ವೀಡಿಷ್ ಎಂಬ್ರಾಯ್ಡರಿಗಳಿರುವ ನೂರರಷ್ಟು ಬೆಡ್ ಶೀಟ್ ಗಳನ್ನು ಅವರು ಒಣಹಾಕಿದ್ದಾರೆ. ಅಚ್ಚಬಿಳಿಯ, ಕಲೆಗಳಿಲ್ಲದ ಈ ಸ್ವಚ್ಛ ಬೆಡ್ ಶೀಟ್ ಗಳು ಕೊರೋನೋತ್ತರ New Normal ಅನ್ನು ಪ್ರತಿನಿಧಿಸುವ ಈ ಸ್ಥಳ ನಿರ್ದಿಷ್ಟ ಇನ್ಸ್ಟಾಲೇಷನ್ A Laundry Field 2020 ಈಗ ಗಮನ ಸೆಳೆಯುತ್ತಿದೆ.
ತನ್ನ ಕಲಾಕೃತಿಗಳಲ್ಲಿ ವಿಷಯ ಮತ್ತು ವಸ್ತು, ವ್ಯಕ್ತ ಮತ್ತು ಅಮೂರ್ತ, ತಾನು ಮತ್ತು ಇಡಿಯ ಮಹಿಳಾಸಮುದಾಯ ಎಲ್ಲವೂ ಒಂದೇ ಆಗುವ ಬಗೆ ಹೇಗೆಂಬುದನ್ನು ಕಿಮ್ ಸೂ ಜಾ ಅವರು ಒಂದು ಸಂದರ್ಶನದಲ್ಲಿ ವಿವರಿಸಿದ್ದು ಹೀಗೆ: “The way I place my body creates the nature of my body as a symbolic needle that can be seen and experienced, both as a self and an ‘other’; a barometer of each performed location as an axis of space and time. I become a neutral point and at the same time, my body functions as a hermaphroditic tool that encompasses the nature of reality and abstraction, masculine and feminine, and thus subject and object. The artist’s view as an omnipresent gazing point enables these multiple roles to be present at one time. And this relationship can arise only when the engagement of the audience activates the performance by viewing it.” (ಆರ್ಟ್ ರಾಡಾರ್ ಸಂದರ್ಶನ 2013,ಸಂದರ್ಶಕರು: ಕ್ರಿಸ್ತಿನ್ ಲೀ)
ಅಮೆರಿಕನ್ ಕಲಾವಿಮರ್ಶಕ ರಾಬರ್ಟ್ ಸಿ. ಮಾರ್ಗನ್ ಅವರೊಂದಿಗೆ ಕಿಮ್ ಸೂ ಜಾ ಮಾತುಕತೆ:
ಕಿಮ್ ಸೂ ಜಾ ಅವರ ಕುರಿತಾದ ಒಂದು ಕಿರುಚಿತ್ರ ಇಲ್ಲಿದೆ:
ಚಿತ್ರಗಳು
ಕಿಮ್ ಸೂ ಜಾ ಅವರ To Breathe (2019)
ಕಿಮ್ ಸೂ ಜಾ ಅವರ Portrait of yourself (1991)
ಕಿಮ್ ಸೂ ಜಾ ಅವರ Bottari Tricycle (2008)
ಕಿಮ್ ಸೂ ಜಾ ಅವರ Bottari Truck -Migrateurs (2017)
ಕಿಮ್ ಸೂ ಜಾ ಅವರ To Breathe: Obangsaek (2014)
A Needle Woman: Galaxy was a Memory, Earth is a Souvenir ((2014)
ಕಿಮ್ ಸೂ ಜಾ ಅವರ A Laundry Woman (2000)
ಕಿಮ್ ಸೂ ಜಾ ಅವರ Archive of Mind, (2016)
ಈ ಅಂಕಣದ ಹಿಂದಿನ ಬರೆಹಗಳು
ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್
ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್
ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ
ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್
ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ
ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ
ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.