"ಅರ್ಜುನ್ ಯುವ ಬರಹಗಾರ ಅನ್ನುವುದಕ್ಕಿಂತ ಈಗಿನ ಯುವ ಜನತೆಗೆ ಏನು ಬೇಕು ಎಂಬ ನಾಡಿಮಿಡಿತ ಬಲ್ಲ ಬರಹಗಾರ. ಹಾಗಾಗಿ ಅವರದೇ ಆದ ಒಂದು ಓದುಗ ವರ್ಗ ನಿರ್ಮಾಣವಾಗಿದೆ. ಅದರಲ್ಲಿ ಬಹುತೇಕರ ಹೊಸ ಓದುಗರು ಯುವ ಜನತೆ ಅನ್ನೋದು ಹೆಗ್ಗಳಿಕೆ," ಎನ್ನುತ್ತಾರೆ ಶೋಭಾ ರಾವ್. ಅವರು ಅರ್ಜುನ್ ದೇವಾಲದಕೆರೆ ಅವರ ‘ಮಿಕ್ಸ್& ಮ್ಯಾಚ್’ ಕೃತಿ ಕುರಿತು ಬರೆದ ವಿಮರ್ಶೆ.
ಹಳಬರ ಪುಸ್ತಕಗಳೇ ಹೆಚ್ಚು ಹೋಗುತ್ತವೆ ಅನ್ನುವುದು ಪುಸ್ತಕ ಮಾರಾಟದ ವಿಷಯದಲ್ಲಿ ಕೇಳಿಬರುವ ಮಾತು. ಹಾಗೆ ಕೊಳ್ಳುವ ಬಹುತೇಕ ಓದುಗರು ಹಳಬರೆ ಅನ್ನುವುದೂ ಕೂಡ ಸತ್ಯ. ಇದು ವೇಗದ ಯುಗ. ಎರಡು ನಿಮಿಷದ ವಿಡಿಯೋ ಕೂಡ ಓಡಿಸಿಕೊಂಡು ನೋಡುವ, ಎರಡು ಪ್ಯಾರಾಗ್ರಾಫ್ ಇದ್ದರೆ ಸ್ಕ್ರೋಲ್ ಮಾಡಿಕೊಂಡು ಹೋಗುವ ಜಮಾನ. ಎಲ್ಲವೂ ತಕ್ಷಣಕ್ಕೆ ಮುಗಿಯಬೇಕು ಎನ್ನುವ ಧಾವಂತದ ಯುಗ.
ಇಂತ ವೇಗ ಬಯಸುವ ಜನರಿಗೆ ಅಷ್ಟೇ ವೇಗವಾಗಿ ಮುಗಿಸುವ ಕತೆಗಳು ಸಿಕ್ಕರೇ . . . . ?
ಅರ್ಜುನ್ ಮಿಕ್ಸ್ ಎನ್ ಮ್ಯಾಚ್ ಕಥಾ ಸಂಕಲನ ಇಂತಹ ಪುಟ್ಟ ಕತೆಗಳ ಗುಚ್ಚ. ಒಂದು ರೀಲ್ ನೋಡುವ ಸಮಯದಲ್ಲಿ, ಒಂದು ಮೆಟ್ರೊ ಸ್ಟೇಷನ್ ಇಂದ ಇನ್ನೊಂದು ಮೆಟ್ರೊ ಸ್ಟೇಷನ್ ರೀಚ್ ಆಗುವ ವೇಳೆಯಲ್ಲಿ ಓದಿ ಮುಗಿಸಬಹುದಾದ ಪುಟ್ಟ ಪುಟ್ಟ ಕತೆಗಳು ಇಲ್ಲಿವೆ. ಎಲ್ಲವೂ ಈಗಿನ ಜಗತ್ತಿಗೆ ಸಂಬಂಧಪಟ್ಟಂತ ಕತೆಗಳು. ಯುವ ಓದುಗರಿಗೆ ಇಷ್ಟವಾಗುವ, ಈಗಿನ ಕಾಲಮಾನದ ಕತೆಗಳು. ಅರ್ಜುನ್ ಯುವ ಬರಹಗಾರ ಅನ್ನುವುದಕ್ಕಿಂತ ಈಗಿನ ಯುವ ಜನತೆಗೆ ಏನು ಬೇಕು ಎಂಬ ನಾಡಿಮಿಡಿತ ಬಲ್ಲ ಬರಹಗಾರ. ಹಾಗಾಗಿ ಅವರದೇ ಆದ ಒಂದು ಓದುಗ ವರ್ಗ ನಿರ್ಮಾಣವಾಗಿದೆ. ಅದರಲ್ಲಿ ಬಹುತೇಕರ ಹೊಸ ಓದುಗರು ಯುವ ಜನತೆ ಅನ್ನೋದು ಹೆಗ್ಗಳಿಕೆ.
ಇವು ಬದುಕು ಭಾವದ ನೂರು ಕತೆಗಳು. ಹೆಸರೇ ಹೇಳುವ ಹಾಗೆ ಎಲ್ಲಾ ಭಾವಗಳು ಇಲ್ಲಿವೆ. ಓದಿ ಮುಗಿಸುವ ಹೊತ್ತಿಗೆ ಯಾವುದೋ ಒಂದು ಪಾತ್ರ ನಾವಾಗಿರುತ್ತೇವೆ, ನಾವು ಕಂಡ ಪಾತ್ರವೊಂದು ಅಲ್ಲಿ ಸುಳಿದಿರುತ್ತದೆ. ಇಡಿಯಾಗಿ, ಬಿಡಿಯಾಗಿ ಓದಬಹುದು. ರೀಲ್ ನೋಡುವ ಸಮಯದಷ್ಟು ಇದು ವೇಳೆ ಕೇಳಿದರೂ ರೀಲ್ ನೋಡಿ ಮರೆಯುವ ಹಾಗೆ ಈ ಕತೆಗಳು ಮರೆಯುವುದಿಲ್ಲ. ಒಳಗೆ ಒಂದು ಭಾವತಂತು ಖಂಡಿತ ಮೀಟುತ್ತದೆ. ಕೆಲವೊಮ್ಮೆ ಯಾವುದಕ್ಕೋ ಉತ್ತರ ಸಿಕ್ಕರೂ ಸಿಗಬಹುದು, ದಾರಿ ತೆರೆದುಕೊಳ್ಳಬಹುದು, ಸಣ್ಣದೊಂದು ಬೆಳಕಿನ ಗೆರೆ ಕಾಣಿಸಬಹುದು. ಅಷ್ಟರಮಟ್ಟಿಗೆ ಇದು ಗೆದ್ದಿದೆ. ಯಾರಿಗೆ ಗೊತ್ತು ಯಾವುದೋ ಜೀವವನ್ನು ಗೆಲ್ಲಿಸಲೂ ಬಹುದು. ಹೊಸದಾಗಿ ಓದಲು ಶುರುಮಾಡುವವರಿಗೂ ಇದು ಖಂಡಿತ ಹೇಳಿ ಮಾಡಿಸಿದ ಪುಸ್ತಕ.
ಕತೆ ನಿಮಗೆ ಇನ್ನಷ್ಟು ಒಲಿಯಲಿ ಅರ್ಜುನ್. ಹೊಸ ಹೊಸ ಓದುಗರು ಸಾಹಿತ್ಯ ಲೋಕಕ್ಕೆ ಸಿಗಲಿ. ಶುಭಾಶಯಗಳು ಹಾಗೂ ಅಭಿನಂದನೆಗಳು.
“ಈ ಕಾವ್ಯ ಅನುಸರಿಸಿದ್ದು ಸರಳ ಮಾದರಿಯ ತಂತ್ರವನ್ನೇ ಆಯ್ಕೆ ಮಾಡಿಕೊಂಡಿದೆ. ವೈಯಕ್ತಿಕ ಬದುಕಿನ ನಿಷೇಧಗಳು, ಪಾಪ ಪ...
"ಪಾರಿಜಾತದ ಸುವಾಸನೆಯ ಕುರಿತಾದ ಒಂದು ಕವನ. ಬಹಳ ನಾಜೂಕಾದ, ದೂರ ದೂರದವರೆಗೂ ತನ್ನ ಘಮವನ್ನು ಹಬ್ಬಿ ಸೆಳೆಯುವ ಪುಷ್...
“ನಮಗೆಲ್ಲಾ ಗೊತ್ತೇ ಇರುವ ಕತೆಯನ್ನು ಅಕ್ಷರದ ಮೇಲೆ ಅಕ್ಷರವಿಟ್ಟು ಪೋಣಿಸಿದ ಈ ಕೃತಿ ನಮ್ಮನ್ನು ಹೊಸಹೊಳಹುಗಳತ್ತ ಹ...
©2025 Book Brahma Private Limited.