ದೇವರು, ದೆವ್ವಗಳ ನಡುವೆಯೊಂದು ಫ್ಯಾoಟಾಸಿ ಜಗತ್ತು..


"ಕತ್ತಲೆಂದರೆ ಭಯ ಪಡುವ ಊರಿನಲ್ಲಿಯೂ ಒಂದು ಹೆಣ್ಣು ತನ್ನ ಪ್ರಿಯಕರನ ಬರುವಿಕೆಗಾಗಿ ಶಬರಿಯಂತೆ ಕಾಯುತ್ತಿದ್ದರೆ, ಮತ್ತೊಂದು ಕಡೆ ಬಂದೂರಿನ ಕತ್ತಲೆಯ ಭಯವನ್ನು ಮೆಟ್ಟಿ ನಿಂತು ಇಂಥ ಭಯಾನಕ ಪ್ರದೇಶದಲ್ಲಿಯೂ ರಾತ್ರಿಯಲ್ಲಿ ವೀರೇಯಂತೆ ಊರ ಕಾಯುತ್ತಿರುವಳು ಮತ್ತೊಬ್ಬಳು ಹೆಣ್ಣು...," ಎನ್ನುತ್ತಾರೆ ಮಂಜುಳಾ ಅಜಯ್ ಭಾರದ್ವಾಜ್. ಅವರು ಅಪರ್ಣ 'ಲಹರಿ' ಅವರ ‘ಲಾಂದ್ರ’ ಕೃತಿ ಕುರಿತು ಬರೆದ ಅನಿಸಿಕೆ.

ಲೇಖಕರು :ಅಪರ್ಣ 'ಲಹರಿ'
ಬೆಲೆ :220
ಪ್ರಕಾಶನ : ನೀಲ ಪ್ರಕಾಶನ
ಪ್ರತಿಗಳಿಗಾಗಿ : +917010042126

ಬೆಳಕಿರುವರೆಗೂ 'ಬಂದೂರು' ಒಂದು ಸಾಮಾನ್ಯ ಹಳ್ಳಿ. ಆದರೇ ಬೆಳಕು ಕಳೆದ ನಂತರ ಬೆಟ್ಟದಿಂದ ಇಳಿದು ಬರುವ ನರಭಕ್ಷಕರ ಅವಾಸ ಸ್ಥಾನವದು. ಅಪ್ಪಿ-ತಪ್ಪಿ ಯಾರಾದ್ರೂ ಕತ್ತಲಿನಲ್ಲಿ ಹೊರಬಂದರೆ ಸಾಕು! ಅವರು ಪುನಃ ಮನೆಗೆ ತಿರುಗುವುದು ಹೆಣವಾಗಿಯೇ!..

ಅದಲದ್ದೆ, ಸತ್ತವರ ಹೆಣಗಳು ಸಿಗುವುದು ಕೂಡ ಅತೀ ಕ್ರೂರವಾಗಿ "ಹೃದಯ" ಕಳೆದುಕೊಂಡು ಸತ್ತ ವಿಕಾರ ರೂಪದಲ್ಲಿ ...!!

ಕತ್ತಲೆಂದರೆ ಭಯ ಪಡುವ ಊರಿನಲ್ಲಿಯೂ ಒಂದು ಹೆಣ್ಣು ತನ್ನ ಪ್ರಿಯಕರನ ಬರುವಿಕೆಗಾಗಿ ಶಬರಿಯಂತೆ ಕಾಯುತ್ತಿದ್ದರೆ, ಮತ್ತೊಂದು ಕಡೆ ಬಂದೂರಿನ ಕತ್ತಲೆಯ ಭಯವನ್ನು ಮೆಟ್ಟಿ ನಿಂತು ಇಂಥ ಭಯಾನಕ ಪ್ರದೇಶದಲ್ಲಿಯೂ ರಾತ್ರಿಯಲ್ಲಿ ವೀರೇಯಂತೆ ಊರ ಕಾಯುತ್ತಿರುವಳು ಮತ್ತೊಬ್ಬಳು ಹೆಣ್ಣು...

ಹೇಗಾದ್ರು ಮಾಡಿ ತಪ್ಪಿಹೋಗಿರುವ ತವರಿನ ನಂಟನು ಮತ್ತೆ ಕಾಪಾಡಿಕೊಳ್ಳಬೇಕು, ದೂರವಾದಷ್ಟು ತವರಿನ ನಂಟಿನ ಗಂಟು ಕೂಡ ಸಡಿಲವಾಗುತ್ತದೆ ಎಂದು ಪರಿತಪಿಸುವ ಅಮ್ಮನ ನೋವನ್ನು ನೋಡಲಾರದೆ ಇಷ್ಟವಿಲ್ಲದೆಯೂ, ಅಮ್ಮನ ತವರಿನ ಕಡೆಗೆ ಪ್ರಯಾಣ ಬೆಳಸುವ 'ಆದಿ'. ಜೊತೆಗೆ ಈ ಮೊದಲೇ ಬಂದೂರಿನ ಇತಿಹಾಸ ತಿಳಿದ ಅವನ ಸ್ನೇಹಿತ 'ಸಿದ್ದು' ಇಬ್ಬರು ಭವಿಷ್ಯದಲ್ಲಿ ಅವ್ರಿಗೆ ತಿಳಿಯದೆ ಬರುವ ಹಲವಾರು ತಿರುವುಗಳನ್ನು ಹೇಗೆ ಎದುರಿಸುತ್ತಾರೆ?

ಇದಿಷ್ಟೇಯಾಲ್ಲದೆ ಬಂದೂರಿನ ಬೆಟ್ಟದ ಮೇಲೆ ನರಭಕ್ಷರು ಮಾತ್ರವಲ್ಲದೆ ಇಡೀ ಭೂಮಂಡಲದಲ್ಲೇ ಅತಂತ್ಯ ಬೆಲೆಬಾಳುವ ನಿಧಿಯು ಇದೆಯಂತೆ! ಆದರೆ ನಿಧಿಯನ್ನು ಪಡೆಯಲು ನರಭಕ್ಷರನ್ನು ದಾಟಿ ಹೋಗ್ಬೇಕು.

ಬಂದೂರಿನಲ್ಲಿ ಇತಿಹಾಸ ತಿಳಿದಿರುವ ಸಿದ್ದುವಿಗೆ ನಿಧಿ ಸಿಗುತ್ತಾ? ತನ್ನ ಪ್ರಿಯಕರ ಬರುವಿಕೆಗಾಗಿ ಕಾಯುತ್ತಿರುವವಳಿಗೆ ಅವಳ ಪ್ರೀತಿ ಒಲಿಯುತ್ತದೆಯೇ? ನರಭಕ್ಷಕರು ಏನಾಗುತ್ತಾರೆ? ಲಾಂದ್ರದ ಬೆಳಕು ಕತ್ತಲಿನ ಊರಿಗೆ ನಿಜಕ್ಕೂ ಬೆಳಕು ನೀಡುತ್ತದೆಯೇ? ದೇವರು, ದೆವ್ವಗಳ ನಡುವೆಯೊಂದು ಫ್ಯಾoಟಾಸಿ ಜಗತ್ತು ಲಾಂದ್ರ ಮೂಲಕ ತೆರೆದುಕೊಳ್ಳುತ್ತದೆ

MORE FEATURES

ಜಾತಿಯನ್ನು ಮೀರಿದ ಮಾನವೀಯತೆ

13-04-2025 ಬೆಂಗಳೂರು

"ಮನುಷ್ಯನ ಹಪಾಹಪಿತನವೊಂದು ಹೆಚ್ಚಿದಾಗ ಅವನದ್ದೆ ಪರಿಸರವನ್ನು ನಾಶ ಮಾಡುವ ಹಂತಕ್ಕೆ ಇಳಿಯುವುದು ಒಂದು ಊರಿಗೆ ಸಂಬಂ...

ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು

13-04-2025 ಬೆಂಗಳೂರು

"ಪ್ರತಿಜೀವಿಗೂ ಹುಟ್ಟಿದೆ ಸಾವಿದೆ. ಕವಿತೆಗೆ ಮಾತ್ರ ಸಾವಿಲ್ಲ. ಸಾಹಿತಿಗೆ ಸಾವಿದೆ ಕೊನೆಯಿದೆ. ಸಾಹಿತ್ಯಕ್ಕೆ ಕೊನೆ...

ಓದುತ್ತ ಹೋದಂತೆ ನಾನು ನೆನಪಿನ ದೋಣಿಯಲ್ಲಿ ಹಿಂದಿರುಗಿ ನೋಡುವಂತೆ ಮಾಡಿವೆ

13-04-2025 ಬೆಂಗಳೂರು

"ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕಿಯಾಗಿದ್ದು, ನೂರಾರು ಕೃತಿಗಳ ಲೇಖಕಿಯಾಗಿ, ಅನುವಾದ ಕ್ಷೇತ್ರದಲ್ಲೂ ದೊಡ್ಡ ಸ...