‘ಕೀಟ ಜಗತ್ತು’ ಕೃತಿಯು ಕೃಷ್ಣಾನಂದ ಕಾಮತ್ ಅವರ ಕೀಟ ಜಗತ್ತಿನ ಕುರಿತ ಲೇಖನಗಳ ಸಂಕಲನವಾಗಿದೆ. ಕೃತಿಯ ಬೆನ್ನುಡಿಯಲ್ಲಿ ಹೀಗೆ ಉಲ್ಲೇಖಿಸಲಾಗಿದೆ ‘ಡಾ. ಕೃಷ್ಣಾನಂದ ಕಾಮತ್ (1934-2002) ಕನ್ನಡ ನಾಡು ಕಂಡ ಅಪೂರ್ವ ಪ್ರತಿಭೆ. ಅಪ್ಪಟ ಮನುಷ್ಯರು. ಸಂಶೋಧಕರು, ಕಾಲುಗಳಿಗೆ ಚಕ್ರ ಕಟ್ಟಿಕೊಂಡು ಸುತ್ತಿದ್ದ ಅಪರೂಪದ ಕ್ಷೇತ್ರಕಾರ್ಯಕರ್ತರು, ಸೃಜನಶೀಲ ಬರಹಗಾರರು, ಅಪೂರ್ವ ಕುಂಚ ಕಲಾವಿದರು, ಛಾಯಾಗ್ರಾಹಕರು, ಪ್ರಾಣಿ-ಪಕ್ಷಿಗಳ ತಜ್ಞರು, ಒಬ್ಬ ವಿಜ್ಞಾನಿ, ಪಾಕಪ್ರವೀಣರು. ಹೀಗೆ ಬಹು ಆಯಾಮಗಳಲ್ಲಿ ತಮ್ಮ ಜೀವಿತಾವಧಿಯನ್ನು ಸವೆಸಿದ ಅನರ್ಘ ರತ್ನ, ಕಾಮತರ ಯಾವುದೇ ಬರವಣಿಗೆಯಲ್ಲೂ ಒಬ್ಬ ಸಂಶೋಧಕನಿರುತ್ತಾನೆ. ಬರಹದ ವಿಷಯ ವಸ್ತು ವಿಚಾರದಲ್ಲಿ ತರ್ಕಬದ್ಧವಾದ, ವೈಜ್ಞಾನಿಕ ದೃಷ್ಟಿಕೋನ ಎದ್ದು ಕಾಣುವ ಅಂಶ. ಲಘು ಹರಟೆಯ ಅವರ ಧಾಟಿ ಓದುಗಸ್ನೇಹಿಯಾಗಿರುತ್ತದೆ. ತುಂಬಾ ಗಹನವಾದ ವಿಚಾರಗಳನ್ನು ಸಾಮಾನ್ಯರಿಗೂ ಅರ್ಥವಾಗುವ ಹಾಗೆ ಸರಳ ನಿರೂಪಣೆಯನ್ನು ಕಾಣಬಹುದು. ಹಾಸ್ಯದ ಮೂಲಕವೇ ಗಂಭೀರ ವಿಚಾರಗಳನ್ನು ತಿಳಿಹೇಳುವ ಛಾತಿ ಕೃಷ್ಣಾನಂದ ಕಾಮತರ ಲೇಖನಿ, ಕುಂಚ, ಕ್ಯಾಮೆರಾಗಳಿಗೆ ಇತ್ತು ಎಂಬುದನ್ನು ಅವರನ್ನು ಓದಿಕೊಂಡ ಯಾರಿಗಾದರೂ ಅನಿಸದಿರದು. ಭಾರತದ ಆದಿವಾಸಿ ಬದುಕಿನ ಅನೇಕ ಮಜಲುಗಳನ್ನು ಕಣ್ಣಾರೆ ಕಂಡು ಕಾಮತರು ಬಿಡಿಸಿಟ್ಟಿದ್ದಾರೆ’ ಎಂದಿದೆ.
©2024 Book Brahma Private Limited.