ನಮ್ಮ ಚರ್ಚೆಗಳು ಚರ್ಚೆಗಳಾಗದೆ ಅಭಿಪ್ರಾಯ ಹೇರಿಕೆಗಳಾಗಿ ಪರಿವರ್ತನೆಗೊಂಡಿದೆ.ಈ ಕಾರಣಕ್ಕೆ ಚರ್ಚೆಗಳ ಜಾಗದಲ್ಲಿ ತೀರ್ಪುಗಳೇ ಹೆಚ್ಚು ಕಾಣಿಸಿಗುತ್ತದೆ.ನಮ್ಮ ಓದು, ಅಧ್ಯಯನ, ತಿಳಿವಿನ ಮಟ್ಟವನ್ನು ಬೇರೆ ಇನ್ನಾರೋ ನಿಯಂತ್ರಿಸುತ್ತಿದ್ದಾರೆ ಎಂಬ ಅನುಮಾನ ಮೂಡಿಬರುತ್ತದೆ.ಸಂಸ್ಕೃತ ಭಾಷೆಯ ಬಗ್ಗೆ ಜನಸಮಾನ್ಯರಲ್ಲಿ ನಡೆಯುವ ಚರ್ಚೆ ಆರೋಗ್ಯಕರವಾಗಿಲ್ಲ. ಸಂಸ್ಕೃತವನ್ನು ದೇವಭಾಷೆಯೆಂದು ಕೆಲವರು ಕೈಮುಗಿದು ಭಕ್ತಿಭಾವ ಮೆರೆದರೆ, ಅದನ್ನು ಪುರೋಹಿತಶಾಹಿಯ ಅಸ್ತವೆಂಬಂತೆ ನೋಡುವಗುಂಪು ಇನ್ನೊಂದು ಕಡೆ.ಸಂಸ್ಕೃತ ಭಾಷೆ ಎದುರಿಸುವ ಸಮಸ್ಯಗಳು,ಭಾಷೆಯ ಅಭಿವೃದ್ದಿಯಗೆ ಬೇಕಾದ ಕೆಲವು ಪೂರಕ ಮಾಹಿತಿ “ಸಂಸ್ಕೃತಕ್ಕಾಗಿ ಹೋರಾಟ' ಈ ಪುಸ್ತಕದಲ್ಲಿದೆ.ಈ ಕೃತಿಯಲ್ಲಿ 11 ಅಧ್ಯಾಯಗಳಿವೆ.
©2025 Book Brahma Private Limited.