ಸಾಹಿತ್ಯದ ಒಂದು ಪ್ರಕಾರವಾದ ಭಾಷಾಂತರದ ಆಳ ಅಗಲವನ್ನು ಚರ್ಚಿಸುವ ಪುಸ್ತಕ, ಅನುವಾದದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳುವವರಿಗೆ ಹೇಳಿ ಮಾಡಿಸಿದಂತಿದೆ. ಹಿರಿಯ ವಿದ್ವಾಂಸರಾದ ಡಾ. ಪ್ರಧಾನ್ ಗುರುದತ್ತ ಅವರೇ ಕೃತಿಯ ಲೇಖಕರೂ ಆಗಿರುವುದು ಅದರ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಭಾಷಾಂತರ ಸೃಜನಶೀಲವೇ ಅಲ್ಲವೇ? ಸೃಜನ ಶೀಲ ಸಾಹಿತ್ಯಕ್ಕೂ ಅನುವಾದದ ಸೃಜನಶೀಲತೆಗೂ ಇರುವ ವ್ಯತ್ಯಾಸಗಳೇನು? ಭಾಷಾಂತರಕಾರ ಮಾಡಿಕೊಳ್ಳಬೇಕಾದ ತಯಾರಿ, ವಿಷಯ, ಹಿನ್ನೆಲೆಯ ಗ್ರಹಿಕೆ ಮುಂತಾದ ತಂತ್ರಗಳನ್ನು ಕೃತಿ ವಿಷದವಾಗಿ ಚರ್ಚಿಸುತ್ತದೆ.
ಲೇಖಕರೇ ಹೇಳುವಂತೆ, ’ಭಾಷಾಂತರ ಕಲೆಯೂ ಹೌದು, ವಿಜ್ಞಾನವೂ ಹೌದು. ಶ್ರೇಷ್ಠ ಮಟ್ಟದ ಭಾಷಾಂತರ ವಾಸ್ತವವಾಗಿ ಒಂದು ಅನುಸೃಷ್ಟಿ..’
ಸಾಹಿತ್ಯ ವಲಯವಷ್ಟೇ ಅಲ್ಲ, ಸರ್ಕಾರದ ಭಾಗವಾಗಿರುವ ಅನುವಾದಕರು, ಪತ್ರಕರ್ತರು ಕೂಡ ಓದಲೇ ಬೇಕಾದ ಕೃತಿ ಇದು.
©2024 Book Brahma Private Limited.