ಭಾರತದ ಪ್ರತಿಯೊಂದು ರಾಜ್ಯಗಳಲ್ಲಿ ಕೂಡ ಅಲ್ಲಿನದೇ ಆದ ಪ್ರತ್ಯೇಕ ಮತ್ತು ವಿಶಿಷ್ಟ ಸಂಸ್ಕೃತಿಯಿದೆ. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ, ಭಾಷಾವಾರು ಸಂಧರ್ಭಗಳಲ್ಲಿ ಅಥವಾ ಉಡುಗೆ ತೊಡುಗೆಯ ವಿಷಯಗಳಲ್ಲಿ ಪ್ರತಿ ಸಂಸ್ಕೃತಿಯು ವಿಭಿನ್ನವಾಗಿ ಗುರುತಿಸಿಕೊಂಡಿದೆ. ಆದರೆ ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಂಡಂತಹ ಪ್ರದೇಶಗಳ ಪರಿಸ್ಥಿತಿ ಮಾತ್ರ ವಿಭಿನ್ನ. ಅಲ್ಲಿ ಎರಡೂ ರಾಜ್ಯಗಳ ಸಂಸ್ಕೃತಿ ಮೇಳೈಸಿರುತ್ತದೆ. ಜನರ ವೇಷ ಭೂಷಣ, ನಡೆ ನುಡಿ, ಸಾಂಸ್ಕೃತಿಕ ಹಿನ್ನೆಲೆ ಎಲ್ಲವೂ ಎರಡೂ ರಾಜ್ಯಗಳ ಪ್ರಭಾವಕ್ಕೆ ಒಳಗಾಗಿರುತ್ತವೆ. ಇಂತಹುದೇ ಒಂದು ಗಡಿ ಜಿಲ್ಲೆಯಾದ ಕಾಸರಗೋಡಿನ ಕುರಿತು ಬರೆದಿರುವಂತಹ ಕೃತಿ ಗಡಿನಾಡ ನುಡಿ ಸೊಗಡು. ಕೇರಳ ಮತ್ತು ಕರ್ನಾಟಕದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿರುವ ಕಾಸರಗೋಡು ಜಿಲ್ಲೆಯಲ್ಲಿ ಎರಡೂ ಜಿಲ್ಲೆಗಳ ಸಂಸ್ಕೃತಿಯ ಪ್ರಭಾವ ಹೇರಳವಾಗಿ ಕಾಣಬಹುದು. ಈ ಪುಸ್ತಕವು ಸಂಸ್ಕೃತಿಯ ಜೊತೆಗೆ ಭಾಷಾ ಕೊಡುಕೊಳ್ಳುವಿಕೆಯ ಕುರಿತು ವಿಶೇಷವಾಗಿ ಮಾಹಿತಿಯನ್ನು ನೀಡುತ್ತದೆ. ಲೇಖಕರಾದ ಮೋಹನ್ ಕುಂಟಾರ್ ಅವರು ಬರೆದಂತಹ ಹಲವು ಲೇಖನಗಳ ಸಂಗ್ರಹ ಇದಾಗಿದ್ದರು ಪುಸ್ತಕವು ಗಡಿನಾಡ ಸೊಬಗಿನ ಕುರಿತು ಮತ್ತು ಅಲ್ಲಿನ ಪರಿಸ್ಥಿತಿಗಳ ಕುರಿತು ಕಲಾತ್ಮಕವಾದ ವಿವರಣೆಯನ್ನು ನೀಡಿದ್ದಾರೆ.
©2024 Book Brahma Private Limited.