ಪ್ರೇಮ, ಸೂಫಿ ಬಂದೇ ನವಾಜ್‌

Author : ಬೋಡೆ ರಿಯಾಜ್ ಅಹ್ಮದ್

Pages 172

₹ 200.00




Year of Publication: 2018
Published by: ನ್ಯೂಸ್‌ ಪ್ಲಸ್‌ ಕಮ್ಯುನಿಕೇಷನ್ಸ್‌
Address: #106, 4ನೇ ಅಡ್ಡರಸ್ತೆ, ಗವಿಪುರಂ ಬಡಾವಣೆ, ಬೆಂಗಳೂರು-560019
Phone: 9845350317

Synopsys

ಗುಲ್ಬರ್ಗಾದ ಮಹಾನ್‌ ಸೂಫಿ ಸಂತ ಬಂದೇ ನವಾಜ್‌ರ ಕುರಿತು ಬರೆದಿರುವ ಕೃತಿ ‘ಪ್ರೇಮ, ಸೂಫಿ ಬಂದೇ ನವಾಜ್‌’. ಬೋಡೆ ರಿಯಾಜ್ ಅಹ್ಮದ್ ತಿಮ್ಮಾಪುರಿ ಅವರು ರಚಿಸಿದ್ದಾರೆ. 

ಸೂಫಿ ಅರ್ಥ ವ್ಯಾಖ್ಯಾನದಿಂದ ಆರಂಭವಾದ ಬೌದ್ಧಿಕ ಎತ್ತರದ ಲೇಖನಗಳು ಸೂಫಿ ಚಿಂತನೆಯ ಮೂಲ ಲಕ್ಷಣಗಳನ್ನು ಚರ್ಚಿಸುತ್ತಾ ಹೋಗುತ್ತದೆ.  ಇದರೊಂದಿಗೆ ವಿಭಿನ್ನ ಸೂಫಿ ಸಂಪ್ರದಾಯಗಳ ಹಾಗೂ ತತ್ವಕಾರರ ಪರಿಚಯವನ್ನೂ ಲೇಖಕರು ಮಾಡಿಕೊಟ್ಟಿದ್ದಾರೆ.

ವಿಷಯ ಸರಳೀಕರಣ ಹಾಗೂ ಸೂಕ್ತ ಸಮರ್ಥನೆಗಾಗಿ ವಸ್ತುವನ್ನು ಐದು ಭಾಗಗಳಾಗಿ ವಿಂಗಡಿಸಿದ್ದು,  ಮೊದ ಭಾಗ -ಸೂಫಿ ಅನುಭವದಲ್ಲಿ ಸೂಫಿ ಹಾಗೂ ತಸವ್ವುಫ್‌, ಉಗಮ, ವ್ಯಾಖ್ಯೆ ಹಾಗೂ ಪರಿಭಾಷೆ ಮತ್ತು ಸೂಫಿ ಚಿಂತನೆ, ಇಬ್ನೆ ಅರಬಿ ಮತ್ತು ವಹದತುಲ್‌ ವುಜೂದ್‌ ಕುರಿತು ಬರೆಯಲಾಗಿದೆ. ಎರಡನೇ ಭಾಗದಲ್ಲಿ ಭಾರತದಲ್ಲಿ ಸೂಫಿ ದಾರ್ಶನಿಕತೆ ಕುರಿತು ಚರ್ಚಿಸಿರುವ ಲೇಖಕರು ಭಾರತದಲ್ಲಿ ಸೂಫಿ ದಾರ್ಶನಿಕತೆಯ ಆಗಮನ ಹಾಗೂ ಪ್ರಸಾರ, ದಖನ್‌ನಲ್ಲಿ ಸೂಫಿಗಳು, ಬಹಮನಿ ಪೂರ್ವ ದಖ್ಖನಿನ ಸೂಫಿಗಳು, ಖಾದ್ರಿಯಾ ಸೂಫಿ ಪರಂಪರೆ, ಜುನೈದಿಯಾ ಸೂಫಿ ಪರಂಪರೆ, ಬಹನಿ ಆಳ್ವಿಕೆಯ ಜುನೈದಿ ಸೂಫಿ ಪರಂಪರೆಯ ಸೂಫಿಗಳು ಹಾಗೂ ಬಹಮನಿ ಯುಗಳ ಚಿಶ್ತಿಯಾ ಪರಂಪರೆ ಸೂಫಿ ಕುರಿತು ವಿಶ್ಲೇಷಣಾತ್ಮಕವಾಗಿ ರಚಿಸಿದ್ದಾರೆ ಮೂರನೇ ಭಾಗದಲ್ಲಿ ಕಲಬುರ್ಗಿಯ ಖ್ವಾಜಾ ಬಂದೇ ನವಾಜ್‌ ಅವರ ಕುರಿತು, ನಾಲ್ಕನೇ ಭಾಗದಲ್ಲಿ ಬಂದೇ ನವಾಜ್‌ ಮತ್ತು ಅನುಭವ ಹಾಗೂ ಐದನೇ ಭಾಗದಲ್ಲಿ ಬಂದೇ ನವಾಜ್‌ರ ಸಾಹಿತ್ಯಕ ಕೊಡುಗೆ ಕುರಿತು ಕೃತಿಯು ಗಂಭೀರವಾಗಿ ಚರ್ಚಿಸಿದೆ. 

About the Author

ಬೋಡೆ ರಿಯಾಜ್ ಅಹ್ಮದ್

ವೃತ್ತಿಯಿಂದ ಸಾರಿಗೆ ಇಲಾಖೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ರಿಯಾಜ್ ಅಹ್ಮದ್ ಅವರು ಪ್ರವೃತ್ತಿಯಿಂದ ಸಾಹಿತ್ಯ- ಕಾವ್ಯಪ್ರೇಮಿ. ಅಕ್ಷರಲೋಕದ  ಮೇಲಿನ ಅವರ ಆಸಕ್ತಿ, ಪ್ರೀತಿ, ಕಾಳಜಿಗಳು ಕೇವಲ ತೋರಿಕೆಗಾಗಿ ಅಲ್ಲ. ಅದು ಹವ್ಯಾಸಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ಮೋಹ - ಹುಚ್ಚು ಸ್ವಂತ ಬರವಣಿಗೆ ಮತ್ತು ಅನುವಾದದ ವರೆಗೆ ವಿಸ್ತರಿಸಿಕೊಂಡಿದೆ. ಕವಿಪುತ್ರನಾಗಿರುವ ಕಾರಣಕ್ಕೆ ಬಾಲ್ಯದಲ್ಲಿ ದೊರೆತ ಸಂಸ್ಕಾರ, ತಿಮ್ಮಾಪುರದ ತಾತ್ವಿಕ- ಧಾರ್ಮಿಕ ಜಿಜ್ಞಾಸೆಗಳು ನೀಡಿದ ಅನುಭವಗಳು ಅವರನ್ನು ರೂಪಿಸಿವೆ. ಅನುಭವದ ಅರಿವು ವಿಸ್ತರಣೆಯಾಗಿ ಅನುಭಾವವಾಗಿದೆ.  ಅದು ಸೂಫಿ ಪ್ರೇಮದಲ್ಲಿ ಬಂದೇನವಾಜ್,  ಮಹಮೂದ್ ಬಹರಿ ಅವರ ಚಿಂತನೆಗಳ ಕನ್ನಡೀಕರಣದ ಮೂಲಕ ಅನಾವರಣಗೊಂಡಿದೆ. ...

READ MORE

Related Books