ನ್ಯಾಯಿಕ ಪ್ರಕ್ರಿಯೆಯ ಸ್ವರೂಪ

Author : ಸಿ.ಕೆ.ಎನ್. ರಾಜ

Pages 118

₹ 90.00




Year of Publication: 2007

Synopsys

ಅದ್ವಿತೀಯ ಕಾನೂನುತಜ್ಞರಾಗಿದ್ದ ನ್ಯಾಯಾಧೀಶ ಬೆಂಜಮಿನ್ ಎನ್. ಕಾರ್ಡೋಜೊ ಅವರು ರಚಿಸಿದ ’ದ ನೇಚರ್ ಆಫ್ ದ ಜುಡಿಷಿಯಲ್ ಪ್ರೊಸೆಸ್’ ಎಂಬ ಕೃತಿಯನ್ನು ನಿವೃತ್ತ ಕಾನೂನು ಪ್ರಾಧ್ಯಾಪಕರಾದ ಡಾ. ಸಿ.ಕೆ.ಎನ್. ರಾಜ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ಇದರಲ್ಲಿ ನ್ಯಾಯಿಕ ಪ್ರಕ್ರಿಯೆಗೆ ಸಂಬಂಧಿಸಿದ ತತ್ತ್ವಶಾಸ್ತ್ರದ ವಿಧಾನ, ಅದರ ಇತಿಹಾಸ, ಸಂಪ್ರದಾಯ, ಸಮಾಜಶಾಸ್ತ್ರದ ವಿಧಾನಗಳು, ನ್ಯಾಯಾಧೀಶನ ಪಾತ್ರ, ಪೂರ್ವನಿದರ್ಶನಗಳು, ಅವುಗಳ ಪಾಲನೆ, ಹಾಗೂ ನ್ಯಾಯನಿರ್ಣಾಯಕ ಪ್ರಕ್ರಿಯೆಯಲ್ಲಿ ಗಮನಿಸಬೇಕಾದ ಮೂಲ ಅಂಶಗಳನ್ನು ವಿವರಿಸಲಾಗಿದೆ. 

About the Author

ಸಿ.ಕೆ.ಎನ್. ರಾಜ
(19 February 1932)

ಬರಹಗಾರ ಸಿ.ಕೆ.ಎನ್. ರಾಜರವರು ಹುಟ್ಟಿದ್ದು 1932 ಫೆಬ್ರುವರಿ 19ರಂದು. ನಂಜನಗೂಡು ಇವರ ಹುಟ್ಟೂರು.  ತಂದೆ ಸಿ.ಕೆ. ನಾಗಪ್ಪ, ತಾಯಿ ಸೀತಾ ಲಕ್ಷ್ಮಮ್ಮ. ಮೈಸೂರಿನ ಯುವರಾಜ ಕಾಲೇಜಿನಲ್ಲಿ ಇಂಟರ್‌ ಮೀಡಿಯೇಟ್‌ ಶಿಕ್ಷಣ ಪದವಿ ಪಡೆದ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ವಕೀಲಿ ವೃತ್ತಿ ಆರಮಭಿಸಿದ ಇವರು ನಂತರ ಮೈಸೂರಿನ ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ಅಧ್ಯಾಪಕ ಹುದ್ದೆ ಹಾಗೂ ಕರ್ನಾಟಟ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ರೀಡರ್‌ ಆಗಿ ಕಾರ್ಯನಿರ್ವಹಿಸಿದ್ದರು. ಬೇರೆ ಬೇರೆ ದಿನಪತ್ರಿಕೆಗಳಿಗೆ ಧಾರಾವಾಹಿ ರೂಪದಲ್ಲಿ ಕಾದಂಬರಿ ರಚಿಸಿ ಪ್ರಕಟಿಸಿದ ಇವರು ಹಾಸ್ಯ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿಕೊಂಡರು. ಪಂಡಿತ್‌ಜೀಗೆ ಸೈನೋಸೈಟಿಸ್‌, ...

READ MORE

Related Books