ಡಾ.ಲೋಹಿಯಾ ಅವರ ರಾಜಕೀಯದ ಮಧ್ಯೆ ಬಿಡುವು

Author : ಕೆ.ವಿ. ಸುಬ್ಬಣ್ಣ

Pages 284

₹ 25.00




Year of Publication: 1986
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು ಸಾಗರ

Synopsys

ಲೋಹಿಯಾ ಅವರ ‘ರಾಜಕೀಯದ ಮಧ್ಯೆ ಬಿಡುವು’ ಕೃತಿಯು ಕೆ.ವಿ ಸುಬ್ಬಣ್ಣ ಅವರ ಬರಹಗಳ ಸಂಕಲನವಾಗಿದೆ. ಭಾರತದ ವರ್ಣವ್ಯವಸ್ಥೆಯನ್ನು, ಜಾತಿಪದ್ದತಿಯನ್ನು ವಿಶ್ಲೇಷಿಸುವ ಲೋಹಿಯಾ ಅವರ ಈ ಬರಹದ ಧಾಟಿ ಮತ್ತು ಧೋರಣೆಯು ರಾಜಕೀಯಬರಹವೊಂದರ ಹೊಸಮಾದರಿಯಾಗಿದೆ. ಹುಡುಗಾಟಿಕೆ ಮತ್ತು ಗಾಂಭೀರ್ಯಗಳ ನಡುವಣ ಗೆರೆ ಗುರುತಿಸುವುದೇ ತೀರ ಕಷ್ಟವೆನ್ನಿಸಿಬಿಟ್ಟಿದೆ. ಜೀವನದಲ್ಲಿ ಯಾವುದನ್ನು ನಾವು ಗಂಭೀರ ಸಂಗತಿಗಳನ್ನುತ್ತೇವೋ ಅಂಥವು ಪ್ರಾಯಃ ಹುಡುಗಾಟಿಕೆಯಾಗಿಯೇ ಕಂಡ ದೇಶಗಳನ್ನು ಅಲ್ಲಿನ ಜನರನ್ನು ಅಲ್ಲಿನ ರಾಜಕೀಯವನ್ನು ಕಾಣುವ ಮತ್ತು ಭಾಷೆಯಲ್ಲಿ ಕಟ್ಟಿಕೊಡುವ ಕಿರುಕಥನಗಳು ಈ ಪುಸ್ತಕದಲ್ಲಿ ಭಿನ್ನವಾಗಿ ಮೂಡಿಬಂದಿದೆ. ‘ಪ್ರಪಂಚದ ಸುತ್ತು’ ಎನ್ನುವ ಮೊದಲನೆಯ ಲೇಖನವೇ ಒಂದು ಅರ್ಥದಲ್ಲಿ ಈ ಪುಸ್ತಕದ ಪ್ರವೇಶಿಕೆಯಾಗಿದೆ. ತಾತ್ವಿಕ ನೆಲೆಯನ್ನು ಕೂಡಾ ಒಳಗೊಂಡಿದೆ.

About the Author

ಕೆ.ವಿ. ಸುಬ್ಬಣ್ಣ
(20 February 1931)

ಕೆ.ವಿ. ಸುಬ್ಬಣ್ಣ ಕನ್ನಡದ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿ ಪಡೆದ ನಂತರ ಅವರು ಕೃಷಿಕಾಯಕ ಆರಂಭಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಅಚ್ಚರಿಪಡುವ ಹಾಗಿದೆ. ಕವಿ, ನಾಟಕಕಾರ, ಅನುವಾದಕರಾಗಿದ್ದ ಅವರು 'ಅಕ್ಷರ ಪ್ರಕಾಶನ' 'ನೀನಾಸಂ ರಂಗ ಚಟುವಟಿಕೆ'ಗಳನ್ನು ನಿರ್ವಹಿಸಿದವರು. ಭಾರತೀಯ ಸಂಸ್ಕೃತಿಗೆ ವಿಶಿಷ್ಟ ಮಾದರಿ ಎನ್ನುವ ಹಾಗೆ ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪುಟ್ಟಹಳ್ಳಿಯಲ್ಲಿ ನಡೆಸಿದ್ದು ಒಂದು ದಾಖಲೆ. ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಹೆಗ್ಗೋಡು ಅಂತರರಾಷ್ಟ್ರೀಯ ನಕ್ಷೆಯಲ್ಲಿ ದಾಖಲಾಯಿತು. ಕೆ.ವಿ. ಸುಬ್ಬಣ್ಣ ಒಬ್ಬ ವ್ಯಕ್ತಿಯಲ್ಲ, ಮಹಾನ್ ಶಕ್ತಿ. ಅವರ ಬೆಳವಣಿಗೆ ವೈಯಕ್ತಿಕವಾದದ್ದಲ್ಲ, ಸಾಂಘಿಕವಾದದ್ದು. 'ಅಕ್ಷರ ಪ್ರಕಾಶನದ ಮೂಲಕ , 'ನೀನಾಸಂ' ಮೂಲಕ ಅನೇಕ ಪ್ರತಿಭೆಗಳನ್ನು ಅವರು ...

READ MORE

Excerpt / E-Books

ಲೋಹಿಯಾ ಅವರ ‘ರಾಜಕೀಯದ ಮಧ್ಯೆ ಬಿಡುವು’ 

'ರಾಜಕೀಯದ ಮಧ್ಯೆ ಬಿಡುವು' - ಕೆ.ವಿ ಸುಬಣ್ಣ ಅವರು ತಾವು ಅನುವಾದ ಮಾಡಿದ ರಾಮಮನೋಹರ ಲೋಹಿಯಾ ಅವರ ಬರಹಗಳ ಸಂಕಲನದ ಈ ಪುಸ್ತಕವನ್ನು ತಮ್ಮ ಹಸ್ತಾಕ್ಷರದಲ್ಲಿ ನನ್ನ ಹೆಸರನ್ನು ಬರೆದು ನನಗೆ ಕೊಟ್ಟಿದ್ದು 1986ರಲ್ಲಿ, ಲೋಹಿಯಾ ಸಾಹಿತ್ಯವನ್ನು ನಾನು ಮೊದಲು ಓದಿದ ಪುಸ್ತಕ ಇದು, ಲೋಹಿಯ ಜಗತ್ತು ಬಗ್ಗೆ ಕೇಳಿದ್ದ ಮತ್ತು ಸ್ವಲ್ಪ ಓದಿದ್ದ ನನಗೆ ಈ ಪುಸ್ತಕ ಹೊಸ ದಿಕ್ಕನ್ನು ತೋರಿಸಿತು. ಅನುಭವ ಮತ್ತು ಪುಸ್ತಕಗಳ ಓದಿನ ಮೂಲಕವ ಯಾವುದೇ ಸಿದ್ಧಾಂತ ಅಥವಾ ಚಿಂತನಾಕ್ರಮವನ್ನು ಅರ್ಥೈಸಲು ತೊಡಗಬೇಕು ಎನ್ನುವ ಪಾಠವನ್ನು ಕಲಿಸಿದ ಪುಸ್ತಕ ಕೂಡಾ ಇದು. ಜೊತೆಗೆಯೇ ಅನುಭವ ಮತ್ತು ಓದು ಯಾವೆಲ್ಲ ಬಹುರೂಪಿ ಕ್ಷೇತ್ರಗಳನ್ನು ಒಳಹೊಕ್ಕು ಆರಿವಿನ ದಿಗಂತವನ್ನು ವಿಸ್ತರಿಸಬಹುದು ಎನ್ನುವ ಒಳನೋಟವನ್ನು ಪಡೆದದ್ದು ನಾನು ಈ ಪುಸ್ತಕದ ಓದಿನಿಂದ. 'ಪ್ರಪಂಚದ ಸುತ್ತು' ಎನ್ನುವ ಮೊದಲನೆಯ ಲೇಖನವೇ ಒಂದು ಅರ್ಥದಲ್ಲಿ ಈ ಪುಸ್ತಕದ ಪ್ರವೇಶಿಕೆಯೂ ಹೌದು, ತಾತ್ವಿಕ ನೆಲೆಯೂ ಹೌದು. ಅಲ್ಲಿನ ಆರಂಭದ ಒಂದು ಮಾತು ನನಗೆ ಬಹಳ ಇಷ್ಟ ಹುಡುಗಾಟಿಕೆ ಮತ್ತು ಗಾಂಭೀರ್ಯಗಳ ನಡುವ ಗೆರೆ ಗುರುತಿಸುವುದೇ ತೀರ ಕಷ್ಟವೆನ್ನಿಸಿಬಿಟ್ಟಿದೆ. ಜೀವನದಲ್ಲಿ ಯಾವುದನ್ನು ನಾವು ಗಂಭೀರ ಸಂಗತಿಗಳನ್ನುತ್ತೇವೋ ಅಂಥವ ಪ್ರಾಯಃ ಹುಡುಗಾಟಿಕೆಯಾಗಿಯೇ ಬಿಸಿ ಹುಟ್ಟಿಕೊಂಡಿರುತ್ತವೆ. ಜಗತ್ತಿನ ಒಂದು ಸುತ್ತಿನ ಪ್ರವಾಸದಲ್ಲಿ ಲೋಹಿಯಾ ತಾವ ಕಂಡ ದೇಶಗಳನ್ನು ಅಲ್ಲಿನ ಜನರನ್ನು ಅಲ್ಲಿನ ರಾಜಕೀಯವನ್ನು ಕಾಣುವ ಮತ್ತು ಭಾಷೆಯಲ್ಲಿ ಕಟ್ಟಿಕೊಡುವ ಕಿರುಕಥನಗಳು ನನ್ನ ಓದಿನ ಆಳಕ್ಕೆ ಇಳಿದಂತೆಲ್ಲಾ ಜಗತ್ತನ್ನು ಅದಕ ನೋಡುವ ಹೊಸ ಕಣ್ಣುಗಳನ್ನು ನಾನು ಪಡೆದೆ.

1973 - 74ರಲ್ಲಿ ಸಾಂಸ್ಕೃತಿಕ ಮಾನವವಿಜ್ಞಾನದ ಓದಿನಿಂದ ಸಾಂಸ್ಥಿಕ ಧರ್ಮದ ನಿರಾಕರಣೆಯನ್ನು ಸರಳವಾಗಿ ಒಪ್ಪಿಕೊಂಡಿದ್ದ ನನಗೆ ಭಾರತೀಯ ಪುರಾಣಗಳ ಮರುಓದಿಗೆ ಪ್ರೇರಣೆ ಕೊಟ್ಟ ಬರಹ 'ರಾಮ ಕೃಷ್ಣ ಶಿವ', ಸಾಹಿತ್ಯ ವಿಮರ್ಶೆಯಲ್ಲಿ ಕರ್ಥ ಮಿಥಿಕಲ್ ಕ್ರಿಟಿಸಿಸಂನ್ನು ನಾನು ಓದುವ ಬಹಳ ಮೊದಲೇ ಲೋಹಿಯಾ ಅವರ ಈ ಲೇಖನ ನನಗೆ ಪುರಾಣ ಮತ್ತು ಸಾಂಸ್ಕೃತಿಕ ಭೂಗೋಳಶಾಸ್ತ್ರವನ್ನು ಒಟ್ಟಿಗೆ ನೋಡುವ ಬರಹವು ಸರಳಸೂತ್ರದ ವ ದಾರಿಯನ್ನು ತೋರಿಸಿತು. 'ಸೌಂದರ್ಯ ಮತ್ತು ಮೈಬಣ್ಣ' ಎಳೆಯನ್ನು ಹಿಡಿದುಕೊಂಡು ವರ್ಣಭೇದ ನೀತಿ ಮತ್ತು ಜಾತಿಗಳ ತಾರತಮ್ಯದಂತಹ ಸಾಮಾಜಿಕ ರಾಜಕೀಯ ಸಮಸ್ಯೆಗಳನ್ನು ಅನಾವರಣ ಮಾಡಬಹುದು ಎನ್ನುವುದನ್ನು ಆ ತೋರಿಸಿಕೊಟ್ಟಿತು. ಧರ್ಮ, ಇತಿಹಾಸ ಮತ್ತು ರಾಜಕೀಯ ಸಂಬಂಧದ ಸೂಕ್ತ ಹೆ ಅವಲೋಕನದ ದೃಷ್ಟಿಯಿಂದ 'ಕಲ್ಲಿನ ಮಾತು' ಒಂದು ಅದ್ಭುತ ಬರಹ. ಲೇಖನದ ಕೊನೆಯಲ್ಲಿ ಲೋಹಿಯಾ ಹೇಳುವ ಮಾತು: “ಅನಾಗರಿಕ ಮೂರ್ಖರು ಮತ್ತು ನಾಜೂಕಿನ ನಮಂಸಕರು, ನಮ್ಮ ಪೂರ್ವಜರು ನಿರ್ಮಿಸಿದ್ದನ್ನು ಕಾಪಾಡಿಕೊಳ್ಳಲು ಸಮರ್ಥರಾಗದೆ ಹೋದರು. ಹೊಸದಾಗಿ ನಿರ್ಮಿಸಲೂ ಅವರು ಅಸಮರ್ಥರೇ, ಸೃಷ್ಟಿಯೆಂದರೆ ಸ್ವತಂತ್ರವಾದ ಬದುಕು, ವೀರ್ಯವತ್ತಾದ ಬದುಕು.

ಲೋಹಿಯಾ ಲಕ್ಷ್ಮೀ ಜೈಲ್‌ನಲ್ಲಿ ಇದ್ದಾಗ ಜೈಲು ಮಂತ್ರಿಗಳಿಗೆ ಬರೆದ ಪತ್ರ 'ವಸಿಷ್ಠರುಗಳು ಮತ್ತು ವಾಲ್ಮೀಕಿಯರು' - ಇಬ್ಬರು ಪುರಾಣದ ಋಷಿಗಳನ್ನು ರೂಪಕವಾಗಿ ಇಟ್ಟುಕೊಂಡು ಸಮಕಾಲೀನ ರಾಜಕೀಯ ಧೋರಣೆಯನ್ನು ಕಟುವಾಗಿ, ಆದರೆ ವೈಚಾರಿಕವಾಗಿ ವಿಮರ್ಶಿಸಿದ ಅಪೂರ್ವ ಬರಹ. ಭಾರತದ ವರ್ಣವ್ಯವಸ್ಥೆಯನ್ನು, ಜಾತಿಪದ್ಧತಿಯನ್ನು ವಿಶ್ಲೇಷಿಸುವ ಲೋಹಿಯಾ ಅವರ ಈ ಬರಹದ ಧಾಟಿ ಮತ್ತು ಧೋರಣೆಯು ರಾಜಕೀಯ ಬರಹವೊಂದರ ಹೊಸಮಾದರಿ.

'ಪುಸ್ತಕಗಳ ಅವಲೋಕನ' ಬರಹವು ಲೋಹಿಯಾ ಓದಿನ ಒಂದು ತುಣುಕು. ಅವರು ಭಾಷೆಗಳು, ವರ್ಣಮಾಲೆ, ನದಿಗಳು, ಆಟಗಳು, ಯೋಗ, ಇಂಡಿಯಾದ ಏಕತೆ-ಇಂತಹ ವಿಷಯಗಳ ಬಗ್ಗೆ ಮತ್ತು ಅವುಗಳ ಒಳಗಿನ ರಾಜಕೀಯದ ಒಳಸುಳಿಗಳ ಬಗ್ಗೆ, ತಾರತಮ್ಯಗಳ ಒಳಪದರುಗಳ ಬಗ್ಗೆ ಇಲ್ಲಿ ಬರಹಗಳನ್ನು ಬರೆದಿದ್ದಾರೆ. ಈ ಗ್ರಂಥದ ಓದಿನ ಬಳಿಕ ಲೋಹಿಯಾ ಸಮಗ್ರ ಸಾಹಿತ್ಯವನ್ನು ಕನ್ನಡ ಅನುವಾದದಲ್ಲಿ ಓದುವ ಅವಕಾಶ ಸಿಕ್ಕಿದೆ. ಲೋಹಿಯಾ ಬಗೆಗಿನ ಅಧ್ಯಯನದ ಗ್ರಂಥಗಳು ಕನ್ನಡದಲ್ಲಿ ಓದಲು ದೊರೆತಿವೆ. ಬಹುಶಿಸ್ತೀಯ ಪುಸ್ತಕಗಳ ಓದಿನ ಮೂಲಕವೇ ಸಮಕಾಲೀನ ಜಗತ್ತನ್ನು ಅರ್ಥೈಸಲು ತೊಡಗಬೇಕು ಎನ್ನುವ ನನ್ನ ಅರಿವಿನ ನೆಲೆಯು 'ರಾಜಕೀಯದ ಮಧ್ಯೆ ಬಿಡುವು' ಗ್ರಂಥದ 35 ವರ್ಷಗಳ ಹಿಂದಿನ ನನ್ನ ಓದಿನ ತಳಪಾಯದ ಮೇಲೆಯೇ ನಿಂತಿದೆ.

( ಬರಹ : ಬಿ.ಎ ವಿವೇಕ ರೈ, ಮಂಗಳೂರು. ಕೃಪೆ : ಹೊಸ ಮನುಷ್ಯ)

Related Books