ಕರ್ನಾಟಕ ರಾಜ್ಯದ ಈಶಾನ್ಯ ಭಾಗದಲ್ಲಿ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ನಡುವೆ ಇರುವ ಜಿಲ್ಲೆಯಾಗಿದೆ ಈ ಕೊಪ್ಪಳ. ಜಾತ್ರೆಯು ಜಾನಪದರ ಆಸಕ್ತಿಯ ಕ್ಷೇತ್ರವಾಗಿದೆ. ಕೊಪ್ಪಳ ಜಿಲ್ಲೆಯ ಭೌಗೋಳಿಕತೆ ,ಸಾಮಾಜಿಕತೆ, ಜನರ ಆಶೋತ್ತರಗಳ ಕುರಿತು ಅಧ್ಯಯನ ನಡೆಸಿದ ಇವರು , ಕೊಪ್ಪಳ ಜಿಲ್ಲೆಯಲ್ಲಿ ನಡೆಯುವ ಒಟ್ಟು ತಾಲೂಕುಗಳ ಜಾತ್ರೆಯ ಕುರಿತು ,ಅದರ ಹಿನ್ನೆಲೆ, ಇತಿಹಾಸ, ವಾಸ್ತವ ಚರಿತ್ರೆ, ಇಲ್ಲಿರುವ ದೇವತೆಗಳ ಬಗ್ಗೆ , ದೇವತೆಗಳ ಮಹತ್ವ , ಅದರ ಇತಿಹಾಸ, ಅದರಲ್ಲೂ ಪ್ರಧಾನ ದೇವತೆಗಳ ಬಗ್ಗೆ , ದೇವಾಸ್ಥಾನ , ಗುಡಿ,ಮಠ. ದರ್ಗಾ, ಮೊದಲಾದ ಧಾರ್ಮಿಕ ಆರಾಧನಾಲಯಗಳ ಕುರಿತು , ಅದಕ್ಕೆ ಇರುವ ಮಹತ್ವ, ವೈಶಿಷ್ಟ್ಯತೆಗಳ ಕುರಿತು ಪ್ರೊ. ಎಸ್.ಎಸ್.ಹಿರೇಮಠ ರು ಈ ಕೃತಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ.
©2024 Book Brahma Private Limited.