ಜನಪದರು ತಾವು ಖುಷಿಯಿಂದ ಆಚರಿಸುವ ಜಾತ್ರೆಯ ಬಗ್ಗೆ , ಜನರು ಪರಸ್ಪರರು ಭೇಟಿಯಾಗುತ್ತಾ ವಿಜಯೋತ್ಸವದ ತರ ಆಚರಿಸುತ್ತಿರವ ಜಾತ್ರೆಯು ಯಾವ ರೀತಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ. ಪ್ರತಿಯೊಂದು ತಾಲೂಕಿನಲ್ಲಿ ನಡೆಯವ ತಾಲೂಕಿನ ಭೌಗೋಳಿಕ ಹಿನ್ನೆಲೆ, ಅದರ ಇತಿಹಾಸ, ದೇವತೆಗಳ ಮಹತ್ವ, ಅದರಲ್ಲೂ ಪ್ರಧಾನ ದೇವತೆಗಳು , ಗುಡಿ , ಮಠ, ಮೊದಲಾದ ಧಾರ್ಮಿಕತೆಯ ಬಗ್ಗೆ ಈ ಕೃತಿಯು ವಿವರಿಸುತ್ತದೆ. ಮಂಡ್ಯ ಜಿಲ್ಲೆಯ ಸ್ವರೂಪವನ್ನು ವಿವರಿಸುವ ಈ ಕೃತಿಯೂ ಒಟ್ಟು ಮಂಡ್ಯ ಜಿಲ್ಲೆಯ ಬಗ್ಗೆ, ಅಲ್ಲಿಯ ಸ್ಥಳೀಯ ಭೌಗೋಳಿಕತೆಯ ಬಗ್ಗೆ ವಿವರಗಳನ್ನು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.