ವಿಶಿಷ್ಟ ವಸ್ತುವಿಷಯಗಳನ್ನು ತಮ್ಮ ಕೃತಿಗಳಿಗೆ ಆಯ್ದುಕೊಳ್ಳುವ ಜೆ. ಬಾಲಕೃಷ್ಣ ಅವರು ಕನಸಿನ ಕುರಿತು ಬರೆದ ಪುಸ್ತಕ ಇದು. ನಿದ್ದೆಯ ಸಮಯದಲ್ಲಿ ಕನಸುಗಳು ಮೂಡುವ ಮತ್ತು ಕನಸುಗಳ ಮೂಲಕ ಮನುಷ್ಯ ತನ್ನ, ಆಸೆ, ಆಕಾಂಕ್ಷೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಅದರ ಜೊತೆಗೆ ಕನಸುಗಳು ಹೇಗೆ ಸೃಷ್ಠಿಯಾಗುತ್ತೆ ಎಂಬುದನ್ನು ವಿಶ್ಲೇಷಿಸಿ, ಆ ಕನಸುಗಳಲ್ಲಿ ಮೂಡುವ ಸಂಕೇತಗಳನ್ನು ವೈಜ್ಞಾನಿಕವಾಗಿ ವಿವರಿಸಲು ಈ ಕೃತಿಯಲ್ಲಿ ಪ್ರಯತ್ನಿಸಲಾಗಿದೆ.
©2025 Book Brahma Private Limited.