ಜೀವತಂತ್ರಜ್ಞಾನ ಅರ್ಥವಿವರಣಾ ಕೋಶ

Author : ಜೆ.ಬಾಲಕೃಷ್ಣ

Pages 180

₹ 50.00




Published by: ಕನ್ನಡ ಅಧ್ಯಾಯನ ವಿಭಾಗ ಕೃಷಿ ವಿಶ್ವವಿದ್ಯಾಲಯ ಬೇಂಗಳೂರು

Synopsys

ಜನಸಾಮಾನ್ಯರಲ್ಲಿ ಜೀವತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯ ಪ್ರಸ್ತಾಪಿಸುವಾಗ ಮೂಲಪದಗಳನ್ನು ಅರ್ಥಗೊತ್ತಿಲ್ಲದಿದ್ದರೂ ಬಳಸುವ ಅಭ್ಯಾಸವಿದೆ. ಈ ಕೊರತೆಯನ್ನು ನಿವಾರಿಸಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ರೈತರು, ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಜೀವತಂತ್ರಜ್ಞಾನದ ಪಾರಿಭಾಷಿಕ ಶಬ್ದಗಳಿಗೆ ಕನ್ನಡದಲ್ಲಿ ಅರ್ಥ ಮತ್ತು ವಿವರಣೆ ನೀಡುವ ಕೃತಿ ಪ್ರಕಟಿಸಿದೆ.

ಜೀವತಂತ್ರಜ್ಞಾನದಲ್ಲಿ ಹೆಚ್ಚು ಬಳಕೆಯಲ್ಲಿರುವ ಆಂಗ್ಲ ಪದಗಳಿಗೆ ಪರ್ಯಾಯವಾದ ಕನ್ನಡ ಪದಗಳು ಮತ್ತು ಅವುಗಳಿಗೆ ಸಂಕ್ಷಿಪ್ತವಾದ ಅರ್ಥ ವಿವರಗಳನ್ನೂ  ಕೃತಿಯಲ್ಲಿ ನೀಡಲಾಗಿದೆ.

About the Author

ಜೆ.ಬಾಲಕೃಷ್ಣ

ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜೆ.ಬಾಲಕೃಷ್ಣ ಅವರು ಕೃಷಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಸ್ನಾತಕೊತ್ತರ ಹಾಗೂ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಾಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಕಾರ್‍ಟೋನಿಸ್ಟ್ ಆಗಿಯು ಗುರುತಿಸಿಕೊಂಡಿರುವ ಬಾಲಕೃಷ್ಣರವರ ಆಸಕ್ತಿಯ ಕ್ಷೇತ್ರಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ,ಸೂಫಿ,ಝೆನ್,ತತ್ವದರ್ಶನದ ವರೆಗೂ ಅವರ ಜ್ಞಾನ ಹರಡಿಕೊಂಡಿದೆ. ...

READ MORE

Related Books