ಗಟ್ಟಿಗಿತ್ತಿ

Author : ವಿಶ್ವೇಶ್ವರ ಭಟ್

Pages 172

₹ 175.00




Year of Publication: 2018
Published by: ಧಾತ್ರಿ ಪ್ರಕಾಶನ
Address: ಮೈಸೂರು

Synopsys

ಪತ್ರಕರ್ತ ಹಾಗೂ ಅಂಕಣಕಾರ ವಿಶ್ವೇಶ್ವರ ಭಟ್ ಅವರ ಕೃತಿ-ಗಟ್ಟಿಗಿತ್ತಿ-ಭಾರತದ ಪ್ರಥಮ ಮಹಿಳಾ ಬಾಕ್ಸರ್ ಮೇರಿ ಕೋಮ್ ಆತ್ಮಕಥನ. ಮಹಿಳೆಯರಿಗೆ ಹಲವು ಸ್ವಾತಂತ್ಯ್ರಗಳನ್ನು ನಿಷೇಧಿಸಿದ್ದು ಭಾರತದ ಹಿಂದೂ ಧರ್ಮದ ಇತಿಹಾಸ ತಿಳಿಸುತ್ತದೆ. ಮಹಿಳಾ ಸಮುದಾಯದ ಪ್ರಬಲ ವಿರೋಧದ ಮಧ್ಯೆಯೂ ಅಲ್ಲಲ್ಲಿ ಉಳಿದಿದೆ. ಇಂತಹ ಸಾಮಾಜಿಕ ಸ್ಥಿತಿಯಲ್ಲಿ ಮೇರಿ ಕೋಮ್ ಎಂಬುವರು ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ವಿಶ್ವಮಟ್ಟದಲ್ಲಿ ಪ್ರತಿನಿಧಿಸಿ, ತಮ್ಮ ಪ್ರತಿಭೆಯನ್ನು ತೋರಿದ್ದು, ಆ ಮೂಲಕ ದೇಶ ಭಾರತದೆಡೆಗೆ ವಿಶ್ವವೇ ಕಣ್ಣು ತೆರೆದು ನೋಡುವಷ್ಟು ಹಿರಿಮೆ-ಗರಿಮೆ ತಂದುಕೊಟ್ಟಿದ್ದರೆ. ಮೇರಿ ಕೋಮ್ ಬೆಳೆದು ಬಂದ ಬಗೆ, ಅವಳ ಬಾಕ್ಸಿಂಗ್ ಸಾಧನೆ, ಈ ಸಾಧನೆಗಾಗಿ ಅವರ ಶ್ರಮ ಎಲ್ಲವನ್ನು ಕೃತಿಯಲ್ಲಿ ವಿವರಿಸಲಾಗಿದೆ.

About the Author

ವಿಶ್ವೇಶ್ವರ ಭಟ್

ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ  ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ,  “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...

READ MORE

Related Books