ಆಕಾಶದ ಅದ್ಭುತಗಳು ಎಂಬ ಭೌತಶಾಸ್ತ್ರ ಆಧಾರಿತ ಜಿ.ಟಿ ನಾರಾಯಣರಾವ್ ಆವರ ಕೃತಿಯಾಗಿದೆ. ಸುಮಾರು ನಾಲ್ಕು ದಶಕಗಳ ಹಿಂದೆಯೇ ಐಬಿಯಚ್ ಪ್ರಕಾಶನ ವಿದೇಶ ಸುಂದರವರ್ಣಚಿತ್ರಗಳ, ಉತ್ತಮ ಗುಣಮಟ್ಟದ ಮಕ್ಕಳ ಪುಸ್ತಕ ಮೂಲದ, ಮಾಲಿಕೆಗಳನ್ನು ಕನ್ನಡಕ್ಕಿಳಿಸತೊಡಗಿದ್ದರು. ಮೊದಲು 'ಮೂಲವಿಜ್ಞಾನ ಮಾಲೆ'ಯ ಪೂರ್ಣ ಕಟ್ಟು (ಬಹುಶಃ 16 ಪುಸ್ತಿಕೆಗಳ ಕಟ್ಟು) ಪ್ರಕಟವಾಯಿತು. ಹಾಗೇ ಇಂಗ್ಲಿಷ್ ಮೂಲದಲ್ಲಿ ಬಹುಶಃ ನೂರಕ್ಕೂ ಮಿಕ್ಕು ಕಂತುಗಳಲ್ಲಿ ಬಂದಿದ್ದ ಇನ್ನೊಂದು ಮಾಲಿಕೆಯನ್ನು ವಿಜ್ಞಾನಪ್ರಪಂಚ' ಎಂಬ ಹೆಸರಿನಲ್ಲಿ ತೊಡಗಿ ಐದಾರು ಭಾಗಗಳನ್ನೂ ತಂದದ್ದಾಯಿತು. ಇವುಗಳ ಇಂಗ್ಲಿಷ್ ಮೂಲವನ್ನೂ ದೇಶೀಯ ಮುದ್ರಣದಲ್ಲಿ ತಂದು ಸುಲಭ ಬೆಲೆಯಲ್ಲೇ ಕೊಡತೊಡಗಿದ್ದರು. ಪ್ರಧಾನ ಸಂಪಾದಕನ ಜವಾಬ್ದಾರಿ ಮತ್ತು ಬಹುತೇಕ ಅನುವಾದಗಳನ್ನೂ ಜಿ.ಟಿ. ನಾರಾಯಣ ರಾವ್ ಮಾಡುತ್ತಿದ್ದರು ಎಂದು ಪುಸ್ತಕದ ಬಗ್ಗೆ ಲೇಖಕ ಜಿ.ಟಿ. ನಾರಾಯಣರಾವ್ ತಿಳಿಸಿದ್ದಾರೆ.
©2024 Book Brahma Private Limited.