ಆವರ್ತ ಕೋಷ್ಟಕ : ಒಂದು ಪರಿಚಯ ಎಂಬ ವಿಜ್ಞಾನದ ಪುಸ್ತಕವು ಸಿ ಎನ್ ಆರ್ ರಾವ್ ಅವರ ಕೃತಿಯಾಗಿದೆ. ಆವರ್ತ ಕೋಷ್ಟಕದ ಆವಿಷ್ಕಾರವು ವಿಜ್ಞಾನದಲ್ಲಿ ಒಂದು ಪ್ರಮುಖವಾದ ಘಟನೆಯನ್ನು ಸೂಚಿಸುತ್ತದೆ. ಇದು ಬಹುಶಃ ಅತಿ ಶ್ರೇಷ್ಠವಾದ ಮಾನವ ರಚಿತ ಕೋಷ್ಟಕ. ಇದರ ಬಳಕೆಯು ಅಪಾರ ಮತ್ತು ದೀರ್ಘಕಾಲಿಕವಾಗಿದೆ. ವಿಜ್ಞಾನಿಗಳು ಇದನ್ನು ಅಣುಗಳ ಮತ್ತು ವಸ್ತುಗಳ ವಿವಿಧ ಅಂಶಗಳನ್ನು ಊಹಿಸಲು, ವಿನ್ಯಾಸಗೊಳಿಸಲು ಅಥವಾ ವಿವರಿಸಲು ಸತತವಾಗಿ ಬಳಸುತ್ತಾರೆ. ಧಾತುಗಳನ್ನು ವರ್ಗೀಕರಿಸುವ ಅಗತ್ಯ ಮತ್ತು ವರ್ಗಿಕರಿಸಲು ಬಳಸಿದ ವಿಧಾನಗಳು ಆವರ್ತ ಕೋಷ್ಟಕವನ್ನು ರಚಿಸುವಲ್ಲಿ ಪ್ರೇರಣೆಯಾಗಿವೆ. ಆಧುನಿಕ ಆವರ್ತ ಕೋಷ್ಟಕದ ಪ್ರಮುಖ ವೈಶಿಷ್ಟ್ಯಗಳನ್ನು ಮತ್ತು ವಸ್ತುಗಳ ಲಕ್ಷಣಗಳನ್ನು ವಿವರಿಸಲು ಮತ್ತು ಊಹಿಸಲು ಈ ಕಿರುಹೊತ್ತಿಗೆಯಲ್ಲಿ ಪ್ರಯತ್ನಿಸಲಾಗಿದೆ.
©2024 Book Brahma Private Limited.