About the Author

ಡಾ. ತೇಜಸ್ವಿ ಕಟ್ಟೀಮನಿ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದವರು. ಕರ್ನಾಟಕ ವಿ.ವಿ.ಸ್ನಾತಕೋತ್ತರ (ಹಿಂದಿ) ಪದವೀಧರರು. ಧಾರವಾಡದ ಕರ್ನಾಟಕ ಕಾಲೇಜಿನ ಹಿಂದಿ ಭಾಗದಲ್ಲಿ ಹಾಗೂ ಹೈದರಾಬಾದಿನ ಮೌಲಾನಾ ಆಜಾದ್ ಉರ್ದು ವಿ.ವಿ. ಯಲ್ಲಿ ಹಿಂದಿ ಪ್ರಾಧ್ಯಾಪಕರಾಗಿದ್ದರು. ಅಮರಕಂಟಕದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಅವರು ಸದ್ಯ, ಇಂದಿರಾ ಗಾಂಧಿ ರಾಷ್ಟ್ರೀಯ ಆದಿವಾಸಿ ವಿ.ವಿ. ಕುಲಪತಿಗಳು.

ಕೃತಿಗಳು: ರಿವಾಯತ್ ಪದಗಳು, ಜ್ಯೋತಿಬಾ ಫುಲೆ (ರೇಖಾಚಿತ್ರ), ವಾನು ಮೆಚ್ಚಿದ ಹಿಂದಿಕಥೆಗಳು (ಸಂಪಾದಿತ), ಮುಂಗಾರು ಮಳೆ, ಮಂಡಲ ಕಮೀಷನ್: ಒಂದು ಅಧ್ಯಯನ, ಹುಡುಗಿ ಪ್ರೀತಿಸುವುದೇ ಹೀಗೆ (ಮೂಲ ಕವಿತೆಗಳ ಸಂಗ್ರಹ), ಕತ್ತಲೆಯ ಅಳಿವಿನಾಚೆ (ಲೇಖನಗಳ ಸಂಗ್ರಹ) , ಕನ್ನಡದಿಂದ ಹಿಂದಿಗೆ ಅನುವಾದಿತ: ಪಿ. ಲಂಕೇಶ್ ಕಾ ಕಥಾ ಸಾಹಿತ್ಯ, ಅನುವಾದ ಕೆ. ವಿವಿಧ ಆಯಾಮ, ವಸ್ತುನಿಷ್ಠ ಹಿಂದಿ ಪ್ರತಿಯೋಗಿತಾ, ಜಲಗೀತ, ಸೃಷ್ಟಿ ಔರ್ ದೃಷ್ಟಿ, ಹಿಂದಿಯಿಂದ ಕನ್ನಡಕ್ಕೆ: ಗಾಂವ್ ಗಲಿ (ಸಿದ್ಧಲಿಂಗ್ಯ ಅವರ ಆತ್ಮಕಥೆಯ ಹಿಂದಿ ಅವತರಣಿಕೆ) ಜಂಗಲ್ ಕಿ ಮೋಹಿನಿ ಡಾ. ಬುದ್ದಣ್ಣ ಹಿಂಗಮಿರೆ ಅವರ ಕಾವ್ಯ ನಾಟಕ ಸೇರಿ ಕನ್ನಡ ಹಾಗೂ ಇಂಗ್ಲಿಷ್, ಗುಜರಾತಿ ಹೀಗೆ ಇತರೆ ಭಾಷೆಗಳ ಕೃತಿಗಳನ್ನು ಭಾಷಾಂತರಿಸಿದ್ದಾರೆ. 

ಹೊಣೆಗಾರಿಕೆ ನಿರ್ವಹಣೆ: ಕನ್ನಡ ಸಾಹಿತ್ಯ ಅಕಾಡೆಮಿ, ವಿವಿಧ ವಿ.ವಿ. ಶಿಕ್ಷಣಮಂಡಳಿ ಪಠ್ಯಕ್ರಮ ಮಂಡಳಿ, ಕನ್ನಡ ವಿವಿ ಸಿಂಡಿಕೇಟ್ ಸಮಿತಿಗಳ ಸದಸ್ಯರು, ನಿಯತಕಾಲಿಕೆಗಳ ಗೌರವ ಸಂಪದಕರು-ಅಂಕಣಕಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ-ಗೌರವಗಳು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯಂದ ಸೃಜನಶೀಲ ಅನುವಾದ ಪ್ರಶಸ್ತಿ ಹಾಗೂ (2017) ಸಾಹಿತ್ಯ ಶ್ರೀ ಪ್ರಶಸ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ  ಸಾಹಿತ್ಯ ಪರಿಚಾರಕ ಪ್ರಶಸ್ತಿ, ಮಹಾತ್ಮ ಜ್ಯೋತಿಬಾ ಫುಲೆ ಪ್ರಶಸ್ತಿ, ಸಾಹಿತ್ಯ ರತ್ನ ಸಮ್ಮಾನ್, ಗಂಗಾಶರಣ್ ಸಿಂಹ ರಾಷ್ಟ್ರೀಯ ಪ್ರಶಸ್ತಿ, ಇಫ್ಕೋದ ರಾಜಭಾಷಾ ಸಮ್ಮಾನ್ ಪ್ರಶಸ್ತಿ ಲಭಿಸಿದೆ. 

 

ತೇಜಸ್ವಿ ಕಟ್ಟೀಮನಿ