ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಕವಿ, ಬರಹಗಾರ ತಾ.ಸಿ. ತಿಮ್ಮಯ್ಯ ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದವರು. ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ಕಾವ್ಯ, ಶಿಶು ಕಾವ್ಯ, ಕಥಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಅಳಲು, ಕಾವ್ಯ ಸಂಗಮ, ವಾಸ್ತವ, ನನ್ನ ಪಾಡು ನಿನ್ನ ಹಾಡು (ಕಾವ್ಯ), ಚಿಣ್ಣರ ಹಾಡು, ಜಾಣರ ಜೇನು, ಓದಿ ದೊಡ್ಡವನಾಗು (ಶಿಶು ಸಾಹಿತ್ಯ), ತುಣುಕು-ಮಿಣುಕು, ನಗೆಹೊಗೆ (ಚುಟುಕು), ಒಡನಾಡಿಯ ನುಡಿ ಭಿನ್ನಪ (ವಚನ), ಕುಣಿಗಲ್ ತಾಲ್ಲೂಕು ದರ್ಶನ, ಚಿಂತಾಮಣಿ ತಾಲ್ಲೂಕು ದರ್ಶನ( ತಾಲ್ಲೂಕು ದರ್ಶನ) ಮುಂತಾದವು.