ಶಾಂತಾದೇವಿ ಕಣವಿ, ಅವರು ಜನಿಸಿದ್ದು1933ರ ಜನವರಿ 17 ರಂದು ವಿಜಾಪುರದಲ್ಲಿ. ತಂದೆ ಸಿದ್ದಬಸಪ್ಪ ಗಿಡ್ನವರ, ತಾಯಿ ಭಾಗೀರಥಿ ದೇವಿ. ಚೆನ್ನವೀರ ಕಣವಿಯವರ ಸಹಧರ್ಮಿಣಿ, ಧಾರವಾಡದಲ್ಲಿ ವಾಸವಿದ್ದವರು.
ಪ್ರಕಟಿತ ಕೃತಿಗಳು: ಸಂಜೆ ಮಲ್ಲಿಗೆ( 1967), ಬಯಲು ಆಲಯ (1973),ಮರು ವಿಚಾರ ( 1978), ಜಾತ್ರೆ ಮುಗಿದಿತ್ತು (ಸಣ್ಣಕತೆ) 1981, ಕಳಚಿ ಬಿದ್ದ ಪೈಜಣ( 1987),ನೀಲಿಮಾ ತೀರ (ಸಣ್ಣಕತೆ) ಗಾಂಧಿ ಮಗಳು ಎಂಬ ಕಥಾಸಂಕಲನಗಳು ಹೊರಬಂದಿವೆ.
ಹರಟೆ ಸಾಹಿತ್ಯ ಅಜಗಜಾಂತರ (ಲಲಿತ ಪ್ರಬಂಧ) 1983, ಗುಣ ಶಿವಯೋಗಿ (ಜೀವನ ಚರಿತ್ರೆ) 1974, ಹಾಗೂ ಸಂಪಾದನೆ - ಪ್ರಶಾಂತ ಎಂಬ ಮಕ್ಕಳ ಸಾಹಿತ್ಯವೂ ಇವೆ.
ಶಾಂತಾದೇವಿ ಕಣವಿ ಅವರಿಗೆ ಬಯಲು ಆಲಯ ಕೃತಿಗೆ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1987) ಹಾಗೂ 2009ರ ರಾಜ್ಯ ಸರ್ಕಾರದ ದಾನ ಚಿಂತಾಮಣಿ ಪ್ರಶಸ್ತಿ ಸಂದಿದೆ.