About the Author

ಲೇಖಕಿ ಡಾ.ಶೈಲಜಾ ಎನ್. ಬಾಗೇವಾಡಿ ಅವರು ಗ್ರಾಮೀಣ ನೆಲೆಯ ಕೂಡು ಕುಟುಂಬದಿಂದ ಬಂದವರು. ಪ್ರಾಚೀನ, ಆಧುನಿಕ ಕನ್ನಡ ಸಾಹಿತ್ಯದ ಎಲ್ಲಸ್ಥಿತ್ಯಂತರಗಳನ್ನೂ ಅಧ್ಯಯನದ ಮೂಲಕ ಅರಿಯಲಿಚ್ಚಿಸುವ ಅವರು ಅದನ್ನು ತಮ್ಮ ಬರವಣಿಗೆಯ ಶ್ರದ್ದೆಯಲ್ಲಿ ತೋರುಗಾಣಿಸಿರುತ್ತಾರೆ.

ಯಾದಗಿರಿ ಜಿಲ್ಲೆಯ ಶಹಾಪೂರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕಿಯಾಗಿದ್ದು, ಅಧ್ಯಾಪನದ ಜೊತೆ ಸಾಹಿತ್ಯ ವ್ಯವಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ. ವಿಮರ್ಶೆ, ಸಂಶೋಧನೆ, ಪ್ರವಾಸ ಹಾಗೂ ಜಾನಪದ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.

ಅವರ ಕೃತಿಗಳು ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿವೆ. ಡಾ.ಎಸ್.ಎಲ್ ಭೈರಪ್ಪನವರ ಕಾದಂಬರಿಗಳ ಕುರಿತು ಮಹಾಪ್ರಬಂಧ ರಚಿಸಿರುವ ಡಾ.ಶೈಲಜಾ, ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಪಡೆದು “ದೇವಾಲಯಗಳ ನಾಡಿನಲ್ಲಿ” ಎಂಬ ಪ್ರವಾಸ ಕಥನ ಬರೆದಿರುವರು. ಪ್ರಸ್ತುತ ಅವರ ಈ"ವಿವೇಚನೆ” ಎಂಬ ಕೃತಿಯೂ ಕನ್ನಡ ಜನಪದ, ಸ್ಥಳ ಚರಿತ್ರೆ, ಆತ್ಮ ಕಥನ, ಕೃತಿ ಪರಿಶೀಲನೆ ಹೀಗೆ ಹತ್ತು ಹಲವು ವಿಷಯಗಳನ್ನು ಅಂತರ್ಗತ ಮಾಡಿಕೊಂಡಿವೆ. ಇಲ್ಲಿಯ ಬರಹಗಳು ಬೇರೆ ಬೇರೆ ಸಂದರ್ಭ ಉದ್ದೇಶಕ್ಕಾಗಿ ಬರೆದವು. ಅವು ಅವಸರದ ಹೇಳಿಕೆಗಳಿಂದ, ತೇಲು ಬರಹಗಳಿಂದ ಮುಕ್ತವಾಗಿ, ಅವುಗಳಲ್ಲಿ ವಿಮರ್ಶಾ ಸಮತೂಕ, ಅನ್ವೇಷಣಾ ದೃಷ್ಟಿಯನ್ನು ಕಾಣುತ್ತೇವೆ. 

ಶೈಲಜಾ ಎನ್. ಬಾಗೇವಾಡಿ