ವೃತ್ತಿಯಲ್ಲಿ ಅಭಿಯಂತರರು ಆಗಿರುವ ಪ್ರಸ್ತುತ ಅಮೇರಿಕಾ ದಲ್ಲಿ ನೆಲೆಸಿರುವ ಇವರು ತಮ್ಮ ಪ್ರೌಢಶಾಲಾ ವಯಸ್ಸಿನಿಂದಲೇ ಸಾಹಿತ್ಯದ ಒಲವು ಹೊಂದಿದ್ದದವರು.ಆಗಾಗ ಸಣ್ಣಕಥೆ, ಕವಿತೆ, ಲೇಖನಗಳನ್ನು ಬರೆದು ಪ್ರಕಟಿಸುತ್ತಿದ್ದ ಅಂತರ್ಜಾಲ ಪತ್ರಿಕೆಯಲ್ಲಿ “ಹುಲ್ಲಾಗು ಬೆಟ್ಟದಡಿ” ಎನ್ನುವ ಅಂಕಣ ಬರಹವನ್ನು ಕೂಡ ಬರೆದು ಸೈ ಎನಿಸಿಕೊಂಡಿದ್ದಾರೆ. ಪ್ರತಿವರ್ಷ ಅಮೇರಿಕನ್ನಡಿಗರೊಂದಿಗೆ ಸೇರಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಇವರು ತಮ್ಮ ಕನ್ನಡ ಪ್ರೀತಿಯಿಂದ ಮನ ಗೆಲ್ಲುತ್ತಾರೆ. ಕೆಲ ದಿನಗಳ ಹಿಂದೆ ಏರ್ಪಡಿಸಲಾಗಿದ್ದ “ನಾವಿಕ ಕಥಾಸ್ಪರ್ಧೆ” ಯಲ್ಲಿ ತೀರ್ಪುಗಾರರ ತಂಡದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಹೊಸ ಹಾದಿಗೆ ತಮ್ಮನ್ನು ತೆರೆದುಕೊಂಡಿರುವುದು ಅಭಿನಂದನಾರ್ಹ.