ರೇವಯ್ಯ ಒಡೆಯರ್ ಅವರು ಎಂ.ಎ, ಎಂ.ಫಿಲ್, ಪಿಎಚ್.ಡಿ ಪದವೀಧರರು. ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ಎಂ.ಫಿಲ್ ಹಾಗೂ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಮಾನವೀಕರಣದ ನೆಲೆಗಳು’ ಪ್ರೌಢ ಪ್ರಬಂಧ ಸಲ್ಲಿಸಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಸಾಹಿತ್ಯದ ಸಿದ್ದಾಂತಗಳನ್ನು ಮಾನವಿಕ ವಿಚಾರಗಳೊಂದಿಗೆ ಅನುಸಂಧಾನಗೊಳಿಸಿ, ತಾತ್ತ್ವಿಕ ಅಭಿಪ್ರಾಯಗಳನ್ನು ಮಂಡಿಸುವಂತಹ ಅನೇಕ ಲೇಖನ ಕಿರುಕೃತಿಗಳನ್ನು ರಚಿಸಿರುತ್ತಾರೆ. ಕುವೆಂಪು ವಿಶ್ವವಿದ್ಯಾಲಯದ ಸಹಕಾರಿ ಅಧ್ಯಯನ ಪೀಠವು ಪ್ರಕಟಿಸಿರುವ ‘ಸದನದಲ್ಲಿ ಕೆ.ಎಚ್. ಪಾಟೀಲ’ ಸಂಪುಟಗಳ ಉಪಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕೃತಿಗಳು : ಉಜ್ಜಯಿನಿ ಶ್ರೀ ಕ್ಷೇತ್ರ ದರ್ಶನ, ಪರಿಪೂರ್ಣ. ಸಂಸದೀಯ ಇತಿಹಾಸ, ನಮ್ಮ ವಿಧಾನಮಂಡಲ, ರಾಜ್ಯಪಾಲರು ಒಂದು ವಿಶ್ಲೇಷಣೆ, ಪ್ರಜಾಪ್ರಭುತ್ವ ಮತ್ತು ಚುನಾವಣಾ ಪದ್ದತಿ, ಮಾನವ ಹಕ್ಕುಗಳು -ಮಾನವತೆಯ ಶಾಸನ ರೂಪ.