ಎಡೆಯೂರು ಪಲ್ಲವಿ ಎಂಬ ನಾಮಾಂಕಿತ ಮೂಲಕ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಯುವ ಕತೆಗಾರ್ತಿ ಪಲ್ಲವಿ ಬಿ.ಎನ್. ಅವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಎಡೆಯೂರಿನವರು. ತಂದೆ ನಾಗರಾಜು ಬಿ.ಎನ್, ತಾಯಿ ಅನಸೂಯ. ಫಾರ್ಮಸಿಯಲ್ಲಿ ಡಿಪ್ಲೊಮಾ, ಬಿ.ಎಸ್ಸಿ ಪದವೀಧರರು. ಪ್ರಸ್ತುತ ಬುಕ್ ಬ್ರಹ್ಮ ಡಿಜಿಟಲ್ ಸಂಸ್ಥೆಯಲ್ಲಿ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಕಥೆ, ಸಣ್ಣ ಕಥೆ, ಕವನ, ಲೇಖನಗಳು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ‘ಭೂಮ್ತಾಯಿ ಅಜ್ಜಿ ಆದ್ಲಾ?’ ಇವರ ಚೊಚ್ಚಲ ಕೃತಿ.