ಸುಚೇತಾ ಗೌತಮ್ ಅವರು ಎಂ. ಟೆಕ್ ಪದವೀಧರೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಸದ್ಯ, ಸಾಫ್ಟ್ ವೇರ್ ಕಂಪೆನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದಾರೆ. ಸೈಬರ್ ಕ್ರೈಮ್ ಸರಣಿ, ವೈಜ್ಞಾನಿಕ ಹಾಗೂ ಸಾಮಾಜಿಕ ಕಥೆ, ಕಾದಂಬರಿಗಳನ್ನು ತರಂಗ, ಸುಧಾ, ಕರ್ಮವೀರ, ಕಸ್ತೂರಿ ಮತ್ತು ಇತರೆ ವಾರ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.
ಆಂಗ್ಲ ಭಾಷೆಯಲ್ಲಿ ಪ್ರವಾಸ ಕಥನಗಳನ್ನುಬ್ಲಾಗ್ ( https://suchetagautham.blogspot.com) ನಲ್ಲಿ ಬರೆಯುತ್ತಾರೆ. “ಮೂವತ್ತು ಸಾವಿರ ವರ್ಷಗಳ ನಂತರ ಮತ್ತು ಇತರ ಕಥೆಗಳು” ಅವರ ಸಾಮಾಜಿಕ, ವೈಜ್ಞಾನಿಕ ಕಥೆಗಳ ಹಾಗೂ ಐಟಿ ಕ್ಷೇತ್ರದಲ್ಲಿ ನಡೆಯುವ ಒಂದು ವಿಭಿನ್ನ ಪತ್ತೇದಾರಿ ಕಥಾ ಸಂಕಲನ. "BLR ಝೀರೋ” ಮತ್ತು “ಬೈನರಿ” ಸೈಬರ್ ಕ್ರೈಮ್ ಸರಣಿಯ ಮೊದಲ ಹಾಗೂ ಎರಡನೆಯ ಕಿರು ಕಾದಂಬರಿಗಳು. “ಕಳ್ಳ ಮತ್ತು ಪೋಲಿಸ್” ಹಾಗೂ “ಹೈಜಾಕ್ಡ್” ಆ ಸರಣಿಯ ಮೊರನೆಯ ಹಾಗೂ ನಾಲ್ಕನೆಯ ಕಿರು ಕಾದಂಬರಿಗಳು.