About the Author

ಲೇಖಕ, ಅನುವಾದಕ ಸುಭಾಷ್ ರಾಜಮಾನೆ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುಸನಾಳದವರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಸ್ನಾತಕೋತ್ತರ ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿಎಡ್ ಪದವಿ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುವ ಅವರು ಪ್ರಸ್ತುತ ಸರ್ಕಾರಿ ರಾಮನಾರಾಯಣ್ ಚೆಲ್ಲಾರಾಮ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅನುವಾದಿಸಿರುವ ಕೃತಿಗಳು: `ದಿ ಆರ್ಟಸ್ಟ್' (ಮೈಕೆಲ್ ಹಜನ್ ವಿಸಿಯಸ್), 'ಬದುಕಿನ ಅರ್ಥವನ್ನು ಹುಡುಕುತ್ತಾ...' (ವಿಕ್ಟರ್ ಫ್ರಾಂಕ್ಲ್), 'ಮುಳುಗದಿರಲಿ ಬದುಕು' (ಎಪಿಕ್ಟೇಟಸ್), 'ರಾತ್ರಿಗೆ ಸಾವಿರ ಕಣ್ಣುಗಳು' (ಅಲೆಸ್ಸಂಡ್ರೋ ಬ್ಯಾರಿಕೊ) ಮತ್ತು 'ಬುದ್ಧಪ್ರಜ್ಞೆಯ ನಡಿಗೆ' (ತಿಚ್ ನ್ಹಾತ್ ಹಾನ್) 

'ನಿರ್ದಿಗಂತವಾಗಿ ಏರಿ: ಕನ್ನಡ ಕಾದಂಬಲಿ ವಿಮರ್ಶೆಯ ವಿಮರ್ಶೆ',- ಪ್ರೊ. ರಹಮತ್ ತಲೀಕೆರೆ ಅವರ ಮಾರ್ಗದರ್ಶನದಲ್ಲಿ ನಡೆಸಿದ ಪಿಎಚ್.ಡಿ. ಅಧ್ಯಯನದ ಸಂಶೋಧನಾ ಕೃತಿ.

ಮೂಡ್ನಾಕೂಡು ಚಿನ್ನಸ್ವಾಮಿಯವರ ಅಭಿನಂದನ ಗ್ರಂಥ  'ಬಹುತ್ವ ಕಥನ'ವನ್ನು ಸಂಪಾದಿಸಿದ್ದಾರೆ. ಸಾಹಿತ್ಯ ಸೇವೆಗಾಗಿ 2022ನೇ ಸಾಲನ 'ಕಾಂತಾವರ ಸಾಹಿತ್ಯ ವಿಮರ್ಶೆ ಪ್ರಶಸ್ತಿ' ಲಭಿಸಿದೆ. 

 

ಸುಭಾಷ್ ರಾಜಮಾನೆ

(01 Jun 1980)