ಹಿರಿಯ ಲೇಖಕ ಸಿದ್ಧರಾಮ ಉಪ್ಪಿನ ಮೂಲತಃ ಅವಿಭಜಿತ ವಿಜಯಪುರ ಜಿಲ್ಲೆಯ ಆಲಮೇಲದವರು.ಈಗ ಆಲಮೇಲವೇ ತಾಲೂಕು ಕೇಂದ್ರವಾಗಿದೆ. ವೃತ್ತಿಯಿಂದ ಕೃಷಿಕರು. ಬರವಣಿಗೆ ಅವರ ಆಸಕ್ತಿದಾಯಕ ಕ್ಷೇತ್ರ. ಬಿ.ಕಾಂ ಶಿಕ್ಷಣವನ್ನು ಹುಬ್ಬಳ್ಳಿಯ ಜೆ.ಜಿ ವಾಣಿಜ್ಯ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. 1996 ರಿಂದ 1999 ರವರೆಗೆ ಕನ್ನಡಪ್ರಭ ತಾಲ್ಲೂಕು ವರದಿಗಾರರಾಗಿ, ಶ್ರೀ ದತ್ತ ನಾಟ್ಯ ವಸ್ತು ಭಂಡಾರದ ಸಂಚಾಲಕರಾಗಿ, ರಂಗ ಪರಿಕರ ಪ್ರಕಾಶನದ ಸಂಚಾಲಕರಾಗಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಹಲವಾರು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 1996 ರಿಂದ 1999 ರವರೆಗೆ ಶಹಾಪುರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, 1998 ರಿಂದ 2001 ರವರೆಗೆ ತಾಲೂಕಿನ ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿದ್ದರು.
ಕೃತಿಗಳು; ಎರಡು ಆತ್ಮ ಒಂದು, ಮಹಾತ್ಮನಲ್ಲ, ದೇವಾ, ರಾಮನಲ್ಲ ರಾವಣ, ಅಲ್ಲಮನ ಮುಖಾಮುಖಿ( ಕಾವ್ಯಗಳು). ಬಹುರೂಪಿ, ಅಂತರ್ಜಲ, ರೂಪಾಂತರ, ಸ್ತಬ್ಧ(ಕಾದಂಬರಿಗಳು), ಸಾವಿನ ಹಕ್ಕಿ, ಸವೆಸಿದ ಸಂತ, ಸಾಮ್ರಾಟನ ದರ್ಬಾರ(ಜೀವನ ಚಿತ್ರಣ) ಬೆನ್ನ ಹಿಂದಿನ ಬೆಳಕು, ಭೀಮಾ ಬಯಲಿನ ಪರಮಹಂಸ, ಅವಧೂತ ಚಿಂತನದ ’ಕುಮಶಿ ವಿಶ್ವರೂಪ ದತ್ತ ಪಾದುಕಾ’, ದಣಿದ ದೋಣಿ, ಶಬ್ಧದೊಳಗಣ ನಿಶ್ಯಬ್ಧ(ಲಲಿತ ಪ್ರಬಂಧ), ಉಪ್ಪಿನ ಗಂಗಾಧರಪ್ಪ, ಸಗರಶ್ರೀ, ಭಾವ ಬೆತ್ತಲೆಯ ಬೋಜಪ್ಪ ದೇಸಾಯಿ(ಸಂಪಾದನೆ ಕೃತಿ), ಭೋಗ ಭೂಮಿ(ಆತ್ಮಚರಿತ್ರೆ) ಅನುವಾದಿತ ಕೃತಿಗಳು; ಸಾಮಾಟ್ರನ ದರ್ಬಾರ ಕೃತಿ( ಪಂಜಾಬಿ ಭಾಷೆ), ಭೀಮಾ ಬಯಲಿನ ಪರಮಹಂಸ (ಮರಾಠಿ), ಕುಮಶಿ ವಿಶ್ವರೂಪದತ್ತ ಪಾದುಕ( ಇಂಗ್ಲೀಷ್, ಮರಾಠಿ)
ಪ್ರಶಸ್ತಿ-ಪುರಸ್ಕಾರಗಳು: 2001 ರಲ್ಲಿ ವಿಜಾಪುರ ಜಿಲ್ಲಾ ಪ್ರತಿಭಾ ಪುರಸ್ಕಾರ ಪ್ರಶಸ್ತಿ, 2000 ರಲ್ಲಿ ಲಿಂಗರಾಜ ಸಾಹಿತ್ಯ ಪ್ರಶಸ್ತಿ, 2011 ರಲ್ಲಿ ಡಾ. ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ ಲಭಿಸಿವೆ.