ಶಾಂತಾ ರಾ. ನಾಡಗೀರ ಸ್ನಾತಕೋತ್ತರ ಪದವೀಧರೆ. ಮಹಾರಾಷ್ಟ್ರದ ಸಾಂಗ್ಲಿಯವರು(ಜನನ: 02-12-1951). ತಂದೆ ಧೋಂಡೋರಾವ್ ದೇಶಪಾಂಡೆ, ತಾಯಿ- ಕಮಲಾಬಾಯಿ ದೇಶಪಾಂಡೆ.
'ಮುದ್ದು ಮಗುವಿಗೊಂದು ಅರ್ಥಪೂರ್ಣ ಹೆಸರು' 1992, ಊರ್ಮಿಳೆಯ ಸ್ವಗತ ಮತ್ತು ಇತರ ಕವನಗಳು (ಕವನ ಸಂಕಲನ-2006) ಕಮಲದ ಹೂಗಳು (ಸೋದರಿಯೊಂದಿಗೆ) ಶಿಶುಕಾವ್ಯ -2010 ರಲ್ಲಿ ಪ್ರಕಟಿತ ಕೃತಿಗಳು.
'ಊರ್ಮಿಳೆಯ ಸ್ವಗತ' (ಕಾವ್ಯ) ಕ.ಲೇ.ಸಂ. ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ-2006 ಹಾಗೂ ಅತ್ಯುತ್ತಮ ಕೃತಿ ಪ್ರಶಸ್ತಿ -2006, ಕಯ್ಯಾರ ಕಿಯ್ಯಣ್ಣ ರೈ ಪ್ರಶಸ್ತಿ-2007, ಸಣ್ಣಕಥಾ ಸ್ಪರ್ಧೆ ದ್ವಿತೀಯ ಬಹುಮಾನ-2009, ಕನ್ನಡ ಸಂಘರ್ಷ ಸಮಿತಿ, ಅತ್ತಿಮಬ್ಬೆ ಕಾವ್ಯ ಪ್ರಶಸ್ತಿ -2009 ರಲ್ಲಿ ನೀಡಿ ಗೌರವಿಸಲಾಗಿದೆ.