ಕಾದಂಬರಿಕಾರ ಎಸ್. ಗುರುಬಸವರಾಜ (ಪಾಪು ಗುರು) ಅವರದ್ದು ಮೂಲತಃ ದಾವಣಗೆರೆ. 1981ರಲ್ಲಿ ಜನಿಸಿದರು. ತಂದೆ - ಎಚ್. ಕೆ. ಶಿವಲಿಂಗಪ್ಪ, ತಾಯಿ - ಬಸಮ್ಮ. ಪಾಪು ಗುರು ಅವರು ವೃತ್ತಿಯಲ್ಲಿ ಮರಗೆಲಸಗಾರ ಹಾಗೂ ಪತ್ರಿಕಾವಿತರಕ. ಪ್ರವೃತ್ತಿಯಲ್ಲಿ ಕವಿ, ಕಾದಂಬರಿಕಾರ. 2018ರಲ್ಲಿ ಪ್ರಕಟವಾದ ಇವರ ಚೊಚ್ಚಲ ಕೃತಿ ‘ಮುಳ್ಳೆಲೆಯ ಮದ್ದು’ ಕವನಸಂಕಲನ ಬೆಂಗಳೂರು ಕನ್ನಡ ಪುಸ್ತಕ ಪ್ರಾಧಿಕಾರ ಇವರ ಪ್ರೋತ್ಸಾಹ ಧನ ಲಭಿಸಿದೆ.